HEALTH TIPS

ಬಲೀಂದ್ರ ಕಪ್-2019- ಬಂಟ್ಸ್ ಪ್ರೀಮಿಯರ್ ಲೀಗ್ ಟ್ರೋಫಿ ಮತ್ತು ಟೀ ಶರ್ಟ್ ಅನಾವರಣ ಹಾಗೂ ಬಿಡುಗಡೆ


      ಕುಂಬಳೆ: ಯುವ ಬಂಟರು ಕುಂಬಳೆ ಇದರ ಪ್ರಾಯೋಜಕತ್ವದಲ್ಲಿ 2019 ತುಳುನಾಡ ಪರ್ಬ ದೀಪಾವಳಿಯ ಆಚರಣೆಗಳ ಅಂಗವಾಗಿ ಕುಂಬಳೆ ಫಿರ್ಕಾ ಬಂಟ್ಸ ಸರ್ವಿಸ್ ಸೋಸೈಟಿ  ಇದರ ಸಹಯೋಗದಲ್ಲಿ ಜಿಎಸ್ಬಿಎಸ್ ಕುಂಬಳೆ ಗಾಂಧಿ ಮೈದಾನದಲ್ಲಿ ನಡೆಯಲಿರುವ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪ್ರೀಮಿಯರ್ ಲೀಗಿನ ಟ್ರೋಫಿ  ಮತ್ತು ಟೀಶರ್ಟನ್ನು ಖ್ಯಾತ ನಾಟಕಕಾರ ಗಡಿನಾಡ ಕೇಸರಿ ಕಲಾತಪಸ್ವಿ ಸುರೇಶ್ ಶೆಟ್ಟಿ ಜೋಡುಕಲ್ಲು ಇವರು ಕುಂಬಳೆ ಉಳಿಪಾಡಿ ಚೇಂಬರ್ಸ್ ನಲ್ಲಿರುವ ಜಿಲ್ಲಾ ಬಂಟರ ಸಂಘದ ಕಾರ್ಯಾಲಯದಲ್ಲಿ ಅನಾವರಣ ಮತ್ತು ಬಿಡುಗಡೆ ಮಾಡಿದರು.
     ಅಧ್ಯಕ್ಷತೆಯನ್ನು ವಳಮಲೆ ಪದ್ಮನಾಭ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಂಕರ್ ಆಳ್ವ ಉಜಾರ್  ಭಾಗವಹಿಸಿದ್ದರು. ಎಲ್ಲಾ ಎಂಟು ತಂಡಗಳ ಮಾಲಕರು, ಕಪ್ತಾನರು, ವ್ಯವಸ್ಥಾಪಕರು ಹಾಜರಿದ್ದರು. ಯುವ ಬಂಟರು ಪದಾಧಿಕಾರಿಗಳಾದ ಪೃಥ್ವಿರಾಜ್ ಶೆಟ್ಟಿ ಕುಂಬಳೆ  ಮತ್ತು ನಟರಾಜ ಆಳ್ವ ಕುಂಬಳೆ ಕಾರ್ಯಕ್ರಮವನ್ನು ನಿರೂಪಿಸಿದರು. ಯವ ಬಂಟರು ಕುಂಬಳೆ ಅಧ್ಯಕ್ಷ ರಾಜೇಶ್ ಶೆಟ್ಟಿ ಕೋಟೆಕ್ಕಾರು ಪದಾಧಿಕಾರಿಗಳಾದ ದಿನಕರ್ ಶೆಟ್ಟಿ , ಹರಿಪ್ರಸಾದ್ ಶೆಟ್ಟಿ ಸೂರಂಬೈಲು, ರತ್ನಾಕರ ರೈ ಬಟ್ಟೆಕಲ್ಲು, ಹರೀಶ್ ಆಳ್ವ ಉಜಾರ್ ಹಾಗೂ ಯುವ ಬಂಟರು ಕುಂಬಳೆ ಪದಾಧಿಕಾರಿಗಳು, ಕಾರ್ಯಕರ್ತರು ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries