HEALTH TIPS

ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆ

       
             ಮುಳ್ಳೇರಿಯ : ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಂಗ ಸಂಸ್ಥೆಯಾದ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆಯು ಭಾನುವಾರ ಅಡೂರಿನ ತಲ್ಪಚ್ಚೇರಿ ಪರಮೇಶ್ವರ ಕಲ್ಲೂರಾಯರ ಮನೆಯಲ್ಲಿ ನಡೆಯಿತು.
    ಸಭೆಯ ಅಧ್ಯಕ್ಷತೆಯನ್ನು ಶಿವಳ್ಳಿ ಬ್ರಾಹ್ಮಣ ಮುಳ್ಳೇರಿಯ ವಲಯ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ವಹಿಸಿದ್ದರು. ಅ.20ರಂದು ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ಬೆಳಿಗ್ಗೆ 10ರಿಂದ ಮುಳ್ಳೇರಿಯ ವಲಯ ಸಂಘಟನೆಯ ವತಿಯಿಂದ ದಸರಾ-ದೀಪಾವಳಿ ಉತ್ಸವ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಲಾಯಿತು. ಸಂಘಟನೆಯ ಪರಸ್ಪರ ಸಹಾಯ ನಿಧಿಗೆ ಸಹಕರಿಸಿದ ಸಮುದಾಯದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಲಾಯಿತು. ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಮುಜುಂಗಾವು ಭಾರತೀ ವಿದ್ಯಾಪೀಠದಲ್ಲಿ ಡಿಸೆಂಬರ್ 21ರಿಂದ 2 ದಿನ ನಡೆಯುವ ಜಿಲ್ಲಾ ಶಿವಳ್ಳಿ ಸಾಂಸ್ಕøತಿಕೋತ್ಸವ ಹಾಗೂ ಅಕ್ಟೋಬರ್ ಹಾಗೂ ನವಂಬರ್ ತಿಂಗಳಲ್ಲಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಡೆಯುವ ಶಿವಳ್ಳಿ ಕ್ರೀಡೋತ್ಸವವನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಯಿತು. ಕಾರ್ಯಕ್ರಮದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ವಾಣಿಜ್ಯ ಬೆಳೆಗಳಿಗೆ ಪೋಷಕಾಂಶದ ಮಾನದಂಡಗಳ ಬಗ್ಗೆ ಬೆಳ್ಳೂರಿನ ಶ್ರೀಪತಿ ಮಾಲೆಂಕಿ ಅವರು ಮಾಹಿತಿ ನೀಡಿದರು. ಸಭೆಯಲ್ಲಿ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮಾ ಎಂ ಭಾರಿತ್ತಾಯ, ಜಿಲ್ಲಾ ಸಮಿತಿ ಜತೆ ಕಾರ್ಯದರ್ಶಿ ಶ್ರೀಪ್ರಕಾಶ್ ಎ, ಮುಳ್ಳೇರಿಯ ವಲಯ ಖಜಾಂಜಿ ಶ್ರೀಪ್ರಸಾದ ಭಾರಿತ್ತಾಯ, ಮುಖಂಡರಾದ ರವಿರಾಜ ಕೇಕುಣ್ಣಾಯ ಆಲಂತಡ್ಕ, ಪರಮೇಶ್ವರ ಕೇಕುಣ್ಣಾಯ ಆಲಂತಡ್ಕ, ಉದಯ ಕುಮಾರ್ ಎ, ಮಹಾದೇವ ಕಲ್ಲೂರಾಯ, ಕಮಲಾಕ್ಷಿ, ಲೀಲಾವತಿ, ಜ್ಯೋತಿ, ವಿಜಯ ಪಿ ಕಲ್ಲೂರಾಯ ಟಿ, ಪಿ ಎಸ್ ನಾರಾಯಣ ಕೆದಿಲಾಯ ಮೊದಲಾದವರು ಭಾಗವಹಿಸಿದ್ದರು. ಸ್ವಯಂಪ್ರಭಾ ಪ್ರಾರ್ಥಿಸಿದರು. ಪರಮೇಶ್ವರ ಕಲ್ಲೂರಾಯ ಸ್ವಾಗತಿಸಿ, ವಲಯ ಕಾರ್ಯದರ್ಶಿ ಪ್ರಶಾಂತ ರಾಜ ವಿ ತಂತ್ರಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries