ಕುಂಬಳೆ: ಮೊಟ್ಟಮೊದಲ ಬಾರಿಗೆ ಯುವ ಬಂಟರು ಕುಂಬಳೆ ಆಯೋಜಿಸಿದ ಬಂಟ ಸಮುದಾಯದ ಕ್ರಿಕೆಟ್ ಪ್ರೀಮಿಯರ್ ಲೀಗ್ ಬಲೀಂದ್ರ ಕಪ್ 2019 ಭಾನುವಾರ ಸಂಪನ್ನಗೊಂಡಿತು. ಒಟ್ಟು ಎಂಟು ತಂಡಗಳು ಭಾಗವಹಿಸಿದ ಈ ಪಂದ್ಯಾಟದಲ್ಲಿ ಬಂಟ್ಸ್ ಬಂಬ್ರಾಣ ಮತ್ತು ರಾಯಲ್ ಬಂಟ್ಸ್ ಎಂಬ ಎರಡು ತಂಡಗಳು ಫೈನಲ್ ಹಂತಕ್ಕೆ ತಲುಪಿ ರೋಚಕ ಘಟ್ಟದಲ್ಲಿ ಬಂಟ್ಸ್ ಬಂಬ್ರಾಣ 2019 ರ ಬಲೀಂದ್ರ ಕಪ್ಪನ್ನು ತನ್ನ ಮುಡಿಗೇರಿಸಿತು.
ಅತ್ಯುತ್ತಮ ವಿಕೆಟ್ ಕೀಪರ್ ಬಂಟ್ಸ್ ಬಂಬ್ರಾಣ ದ ನಾಯಕರಾದ ಹರಿಪ್ರಸಾದ್ ಶೆಟ್ಟಿ ಸೂರಂಬೈಲು ಪಡೆದರೆ, ಬೆಸ್ಟ್ ಆಲ್ರೌಂಡರ್ ರಾಯಲ್ ಬಂಟ್ಸ್ ನಾಯಕರಾದ ಪ್ರೇಮ್ ಕಾಂತ್ ಶೆಟ್ಟಿ ದೇರಂಬಳ್ಳ ಮುಡಿಗೇರಿಸಿದರು. ಅತ್ಯುತ್ತಮ ಕ್ಷೇತ್ರ ರಕ್ಷಕನಾಗಿ ಸುಕೇಶ್ ಶೆಟ್ಟಿ ಬಂಟ್ಸ್ ಬಂಬ್ರಾಣ, ಅತ್ಯುತ್ತಮ ಬೌಲರ್ ಆಗಿ ರಾಜೇಶ್ ಶೆಟ್ಟಿ ರಾಯಲ್ ಬಂಟ್ಸ್ ,ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ ಅಮಿತ್ ಶೆಟ್ಟಿ ರಾಯಲ್ ಬಂಟ್ಸ್ , ಮ್ಯಾನ್ ಆಫ್ ದ ಮ್ಯಾಚ್ ಫೈನಲ್ಸ್ ರತ್ನಾಕರ ರೈ ಬಟ್ಟೆಕಲ್ಲು ಬಂಟ್ಸ್ ಬಂಬ್ರಾಣ, ಮ್ಯಾನ್ ಆಫ್ ದ ಸೀರಿಸ್ ಅನಿಲ್ ಶೆಟ್ಟಿ ಬಂಟ್ಸ್ ಬಂಬ್ರಾಣ ಗಳಿಸಿದರು.
ಪಂದ್ಯಾಟವನ್ನು ಖ್ಯಾತ ಕಬಡ್ಡಿ ಪಟು, ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ಸುಕೇಶ್ ಭಂಡಾರಿ ಕಿದೂರು ಉದ್ಘಾಟಿಸಿದರು. ವೇದಿಕೆಯಲ್ಲಿ ಕುಂಬಳೆ ಬಂಟರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಬಂಟ್ಸ್ ಸರ್ವಿಸ್ ಸೊಸೈಟಿ ಕುಂಬಳೆ ಫಿರ್ಕಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ, ಬಂಟರ ಸಂಘ ಕುಂಬಳೆ ಘಟಕದ ಮಾಜಿ ಅಧ್ಯಕ್ಷ ಶಂಕರ್ ಆಳ್ವ ಉಜಾರ್, ಬಂಟರ ಸಂಘ ಕುಂಬಳೆ ಉಪಾಧ್ಯಕ್ಷ ಲೋಕನಾಥ ಶೆಟ್ಟಿ ಕೆಳಗಿನ ಬೈಲು, ಯುವ ಬಂಟರ ಸಂಘ ಕುಂಬಳೆ ಅಧ್ಯಕ್ಷ ರಾಜೇಶ್ ಶೆಟ್ಟಿ ಕೋಟೆಕಾರು ಮತ್ತು ಉದ್ಯಮಿ ಮುಂಡಪ್ಪ ಶೆಟ್ಟಿ ಕೆಳಗಿನ ಉಜಾರ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಮಾರೋಪ ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಕಾರ್ಯಕಾರಿ ಸಮಿತಿಯ ಚುನಾಯಿತ ಸದಸ್ಯ ಮುಕ್ತಾನಂದ ರೈ ಕುಂಬಳೆ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಸದಸ್ಯ ಗೋಪಾಲಕೃಷ್ಣ ಶೆಟ್ಟಿ ಕುತ್ತಿಕ್ಕಾರು ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಬಂಟರ ಸಂಘ ಕುಂಬಳೆ ಮತ್ತು ಯುವ ಬಂಟರ ಸಂಘದ ಪದಾಧಿಕಾರಿಗಳಾದ ಹರೀಶ್ ಆಳ್ವ ಉಜಾರ್, ನಟರಾಜ್ ಆಳ್ವ ಕುಂಬಳೆ, ದಿನಕರ ಶೆಟ್ಟಿ ಕುಂಬಳೆ, ಹರಿಪ್ರಸಾದ್ ಶೆಟ್ಟಿ ಸೂರಂಬೈಲು, ರತ್ನಾಕರ್ ರೈ ಬಟ್ಟೆಕಲ್ಲು , ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಪ್ರಸಾದ್ ಶೆಟ್ಟಿ ಕುಂಬಳೆ, ಅರುಣ್ ಶೆಟ್ಟಿ ಕೋಟೆಕಾರು, ಉಮೇಶ್ ಚೌಟ ಕೋಟೆಕಾರು ಹಳೆಮನೆ, ಕೀರ್ತಿರಾಜ್ ಶೆಟ್ಟಿ ಕೋಟೆಕಾರು, ಕಿಶನ್ ಶೆಟ್ಟಿ ಕೋಟೆಕಾರು, ಹರೀಶ್ ರೈ ಕೋಟೆಕಾರು, ಧನರಾಜ್ ರೈ ಕೋಟೆಕಾರು, ಗಂಗಾಧರ ರೈ ಕೋಟೆಕಾರು, ನಿತೀಶ್ ಭಂಡಾರಿ ಕೋಟೆಕಾರು ಹೊಸಮನೆ, ಲತೀಶ್ ರೈ ಕಂಚಿಕಟ್ಟೆ, ಲಿಖಿತ್ ಶೆಟ್ಟಿ ಕಂಚಿಕಟ್ಟೆ, ಪವನ್ ಶೆಟ್ಟಿ ಕುಂಬಳೆ ಹಾಗೂ ಯುವ ಬಂಟ್ಸ್ ಸದಸ್ಯರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.


