ಬದಿಯಡ್ಕ: ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ರಜತ ಸಂಭ್ರಮ ಹಾಗೂ ತಿರುವಿಳಕ್ಕ್ ಮಹೋತ್ಸವವು ಡಿಸೆಂಬರ್ 20 ಹಾಗೂ 21ರಂದು ನಡೆಯಲಿರುವುದು. ಕಾರ್ಯಕ್ರಮದ ಯಶಸ್ಸಿಗೋಸ್ಕರ ಹಮ್ಮಿಕೊಂಡ ಲಕ್ಕೀಕೂಪನ್ ಅನ್ನು ಶ್ರೀ ಸನ್ನಿಧಿಯಲ್ಲಿ ವೇಣುಗೋಪಾಲನ್ ಬಾಲುಶ್ಶೇರಿ ಅವರು ಪ್ರಕಾಶ್ ಕಾರ್ಮಾರು ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಶ್ರೀಮಂದಿರದ ಗುರುಸ್ವಾಮಿ ಕುಂಞÂಕಣ್ಣ ಮಣಿಯಾಣಿ, ಸೇವಾ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಜೊತೆಗಿದ್ದರು.


