ಸಮರಸ ಚಿತ್ರ ಸುದ್ದಿ: ಕುಂಬಳೆ: ಬಾರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಜರಗಿದ ಕಾಸರಗೋಡು ಜಿಲ್ಲಾಮಟ್ಟದ ಗಣಿತಮೇಳದ ಜಿಯೋಮೆಟ್ರಿಕಲ್ ಚಾರ್ಟ್ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಎ ಶ್ರೇಣಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ತನುಷ. ಈಕೆ ಕಯ್ಯಾರಿನ ಲಿಂಗಪ್ಪ-ಮೀನಾಕ್ಷಿ ದಂಪತಿ ಪುತ್ರಿ.
2) ಜಿಲ್ಲಾಮಟ್ಟದ ಗಣಿತ ಮೇಳದಲ್ಲಿ ಅಪ್ಲೈಡ್ ಕನ್‍ಸ್ಟ್ರಕ್ಷನ್ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಎ ಶ್ರೇಣಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ದೀಕ್ಷಿತ ಎಸ್. ಈಕೆ ಮಂಗಲ್ಪಾಡಿಯ ದಿನೇಶ್ ಶೆಟ್ಟಿ-ಸುನೀತಾ ದಂಪತಿಯ ಪುತ್ರಿ.
3) ಗಣಿತ ಮೇಳದ ವರ್ಕಿಂಗ್ ಮೋಡೆಲ್ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಎ ಶ್ರೇಣಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ವಿಶ್ವಜಿತ್ ಕೆ. ಈತ ಸಜಂಕಿಲ ಶಾಲೆಯ ಅಧ್ಯಾಪಕ ವಿಘ್ನೇಶ್ವರ ಕೆದುಕೋಡಿ-ವಸಂತಿ ಎಂ. ದಂಪತಿಯ ಪುತ್ರ.




