HEALTH TIPS

ಬದಿಯಡ್ಕದಲ್ಲಿ ಹಿರಿಯ ನಾಗರಿಕರಿಗೆ ಫಿಸಿಯೋಥೆರಪಿ ಶಿಬಿರ ಸಂಪನ್ನ-

     ಬದಿಯಡ್ಕ: ನಿಯಮಿತವಾದ ಆಹಾರ ಸೇವನೆಯೊಂದಿಗೆ ಸುಲಭ ಸಾಧ್ಯವಾಗುವ ಕೆಲವೊಂದು ವ್ಯಾಯಾಮಗಳನ್ನು ಮಾಡಬೇಕು. ಯೋಗ, ನಡಿಗೆ ಹಾಗೂ ಇನ್ನಿತರ ಆರೋಗ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಂಡು ಮುಪ್ಪಿನಲ್ಲಿಯೂ ಆರೋಗ್ಯವಂತರಾಗಿ ಬಾಳಬಹುದು ಎಂದು ಫಿಸಿಯೋಥೆರಪಿಸ್ಟ್ ಗಿರೀಶ್ ಅಭಿಪ್ರಾಯಪಟ್ಟರು.
       ಬದಿಯಡ್ಕ ಸಮುದಾಯ ಆರೋಗ್ಯಕೇಂದ್ರ ಮತ್ತು ಬದಿಯಡ್ಕ ಹಿರಿಯ ನಾಗರಿಕ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಬದಿಯಡ್ಕ ಹಗಲು ಮನೆಯಲ್ಲಿ ಸಂಯೋಜಿಸಲಾದ ಒಂದು ದಿನದ ಫಿಸಿಯೋಥೆರಫಿ ಶಿಬಿರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ತರಗತಿಯನ್ನು ನಡೆಸಿಕೊಟ್ಟರು.
       ಘಟಕದ ಕಾರ್ಯದರ್ಶಿ ಸಂಪತ್ತಿಲ ಶಂಕರನಾರಾಯಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಿರೀಕ್ಷೆಗೂ ಮೀರಿ ಸದಸ್ಯರು ಈ ಶಿಬಿರದಲ್ಲಿ ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ವಿನೋದ್ ಪ್ರಾಸ್ತಾವಿಕವಾಗಿ ಮಾತನಾಡಿ ಹಿರಿಯ ನಾಗರಿಕರಿಗಾಗಿ ಆಯೋಜಿಸುತ್ತಿರುವ ಇಂತಹ ಶಿಬಿರದ ಪ್ರಯೋಜನವನ್ನು ಪಡೆಯುವುದರಿಂದ ವಾರ್ಧಕ್ಯದಲ್ಲಿ ಬರುವಂತಹ ಅನೇಕ ರೋಗಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದರು. ಸಹಾಯಕ ಆರೋಗ್ಯ ಅಧಿಕಾರಿ ಶಕೀರ್, ಆರೋಗ್ಯ ಸಂಚಾಲಕಿ ಅಜಿತಾ ಸಹಕರಿಸಿದರು. ಹಿರಿಯ ನಾಗರಿಕರ ಘಟಕ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್ ಶುಭಹಾರೈಸಿದರು.
    ಆಶಾ ಕಾರ್ಯಕರ್ತೆಯರಾದ ಸರೋಜಿನಿ ಚುಳ್ಳಿಕ್ಕಾನ, ಶಾರದಾ ಚೇರ್ಕೋಡ್ಲು, ಲೀಲಾವತಿ ಕನಕಪಾಡಿ, ಸಾಜಿದಾ ಪಳ್ಳತ್ತಡ್ಕ ಉಪಸ್ಥಿತರಿದ್ದರು. ಘಟಕದ ಉಪಾಧ್ಯಕ್ಷ ಈಶ್ವರ ಭಟ್ ಪೆರ್ಮುಖ ನಿರೂಪಿಸಿದರು. 40ಕ್ಕೂ ಹೆಚ್ಚುಮಂದಿ ಶಿಬಿರದಲ್ಲಿ ಪಾಲ್ಗೊಂಡು ಸುಲಭ ಸಾಧ್ಯವಾದ ವಿವಿಧ ವ್ಯಾಯಾಮಗಳ ತರಬೇತಿಯನ್ನು ಪಡೆದುಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries