ಕುಂಬಳೆ: ಬಟ್ಟೆಕಲ್ಲು ಶ್ರೀಕಲ್ಲುರ್ಟಿ ಕಲ್ಕುಡ ದೈವಸ್ಥಾನದ ಜೀರ್ಣೋದ್ದಾರದ ವಿಜ್ಞಾಪನಾ ಪತ್ರಿಕೆಯನ್ನು ತಂತ್ರಿವರ್ಯ ಬ್ರಹ್ಮಶ್ರೀ ಶಂಕರ ನಾರಾಯಣ ಕಡಮಣ್ಣಾಯ ಕರ್ಕುಳಬೂಡು ಅವರು ಬುಧವಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಲ್ಲುರ್ಟಿ ದೈವದ ಮಾಣಿಚ್ಚಿಲ್ ದೇರಣ್ಣ ರೈ ಹಾಗೂ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.