ಕಾಸರಗೋಡು: ಕೆಸ್ರೂ(ಕೇರಳ ಸ್ಟೇಟ್ ಸೆಲ್ಫ್ ಎಂಪ್ಲಾಯ್ ಮೆಂಟ್ ಸ್ಕೀಂ ಫಾರ್ ದಿ ರೆಜಿಸ್ಟರ್ಡ್ ಆಂಡ್ ಎಂಪ್ಲಾಯ್ ಡ್), ಜೋಬ್ ಕ್ಲಬ್, ಶರಣ್ಯ ಸಹಿತ ಸಂಸ್ಥೆಗಳನ್ನು ಆರಂಭಿಸಲು (ಸ್ವ ಉದ್ಯೋಗ)ಆಸಕ್ತರಾದ ಕಾಸರಗೋಡು ಜಿಲ್ಲೆಯ ಉದ್ಯೋಗಾರ್ಥಿಗಳಿಂದ ಅರ್ಜಿ ಕೋರಲಾಗಿದೆ.
ಜೋಬ್ ಕ್ಲಬ್ ಆರಂಭಿಸುವ ನಿಟ್ಟಿನಲ್ಲಿ 21ರಿಂದ 45 ವರ್ಷದ ವಯೋಮಾನದ ನಡುವಿನವರಾಗಿರಬೇಕು. ಗರಿಷ್ಠ 10 ಲಕ್ಷ ರೂ. ಸಾಲ ಲಭಿಸಲಿದೆ. ಶೇ 25 ಸಬ್ಸಿಡಿಯೂ ದೊರೆಯಲಿದೆ. ಅರ್ಜಿದಾರರ ಕೌಟುಂಬಿಕ ಆದಾಯ ಒಂದು ಲಕ್ಷ ರೂ.ಗಿಂತ ಅಧಿಕವಾಗಿರಬಾರದು.
ಕೆಸ್ರೂ ಆರಂಭಿಸುವ ನಿಟ್ಟಿನಲ್ಲಿ ಅರ್ಜಿದಾರರು 21ರಿಂದ 50 ವರ್ಷ ಪ್ರಾಯದವರಾಗಿರಬೇಕು. ಗರಿಷ್ಠ ಒಂದು ಲಕ್ಷ ರೂ. ಸಾಲ, ಶೇ 20 ಸಬ್ಸಿಡಿ ಲಭಿಸಲಿದೆ.
ಶರಣ್ಯ ಎಂಬುದು ಮಹಿಳೆಯರ ಸಹಾಯಕ್ಕಿರುವ ಯೋಜನೆಯಾಗಿದೆ. ಅವಿವಾಹಿತ ಮಹಿಳೆಯರಾಗಿದ್ದರೆ 30 ವರ್ಷದ ಕೆಳಗಿನ ವಯೋಮಾನದವರಾಗಿರಬೇಕು. ವಿಧವೆಯರು, ವಿವಾಹ ವಿಚ್ಛೇದಿತರು, ಕಳೆದ 7 ವರ್ಷಗಳಿಂದ ಪತಿ ನಾಪತ್ತೆಯಾಗಿರುವವರು, ಪರಿಶಿಷ್ಟ ಪಂಗಡದಲ್ಲಿ ವಿವಾಹಿತರಾಗದೇ ತಾಯಂದಿರಾದವರು ಮೊದಲಾದವರಿಗೆ ಈ ಯೋಜನೆ ಇದೆ.
ಗರಿಷ್ಠ 50 ಸಾವಿರ ರೂ. ಸಾಲ ರೂಪದಲ್ಲಿ ಲಭಿಸಲಿದೆ. ಇದರಲ್ಲಿ ಅಧಾರ್ಂಶ ಮಾತ್ರ ಮರುಪಾವತಿ ನಡೆಸಿದರೆ ಸಾಕು. ಅರ್ಜಿದಾರರ ಕೌಟುಂಬಿಕ ಆದಾಯ 2 ಲಕ್ಷ ರೂ.ಮೀರಬಾರದು.
ಅರ್ಜಿ ಫಾರಂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ(ದೂರವಾಣಿ ಸಂಖ್ಯೆ: 04994-255582) ಮತ್ತು ಹೊಸದುರ್ಗ ಉದ್ಯೋಗ ವಿನಿಮಯ ಕೇಂದ್ರ(ದೂರವಾಣಿ ಸಂಖ್ಯೆ: 04672-209068)ಗಳಲ್ಲಿ ಚಟುವಟಿಕೆ ನಡೆಸುವ ಎಂಪ್ಲಾಯ್ ಮೆಂಟ್ ಇನ್ ಫಾರ್ಮೇ ಷನ್ ಗೈಡೆನ್ಸ್ ಬ್ಯೂರೋದಲ್ಲಿ ಲಭಿಸಲಿದೆ.




