ಮಂಜೇಶ್ವರ: ಕೋಳ್ಯೂರು ಶ್ರೀ ಮಹಾಗಣಪತಿ ಶಂಕರನಾರಾಯಣ ಸಾಂಸ್ಕøತಿಕ ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆಸಿಕೊಂಡು ಬರುತ್ತಿರುವ 9 ನೇ ವರ್ಷದ ಯಕ್ಷಗಾನ ನವಾಹವು ಸಮಾರೋಪದೊಂದಿಗೆ ಸಂಪನ್ನಗೊಂಡಿತು.
ಪ್ರತಿನಿತ್ಯ ಬೆಳಗ್ಗೆ ಕರಾವಳಿಯ ಪ್ರಸಿದ್ಧ ಯಕ್ಷಗಾನ ಕಲಾ ತಂಡಗಳಿಂದ ಯಕ್ಷಗಾನ ತಾಳಮದ್ದಳೆಯು, ಸಮಾರೋಪದಂದು ತೆಂಕುತಿಟ್ಟಿನ ಪ್ರಸಿದ್ಧ ಭಾಗವತರ ಕೂಡುವಿಕೆಯಿಂದ ಯಕ್ಷಗಾನ ವೈಭವ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರು, ಕ್ಷೇತ್ರದ ಅರ್ಚಕರೂ ಆದ ರವಿಶಂಕರ ಹೊಳ್ಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಳಿಕ ಹಿರಿಯ ಯಕ್ಷಗಾನ ಕಲಾವಿದರೂ, ಪ್ರಸಿದ್ಧ ಅರ್ಥಧಾರಿಗಳೂ ಹಾಗು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕುಂಬಳೆ ಸುಂದರ ರಾವ್ ಅವರನ್ನು ಗೌರವಗಳಿಂದ ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು ತಮ್ಮ ಕಲಾ ಸೇವೆಯಲ್ಲಿ ನಡೆದು ಬಂದ ದಾರಿಯನ್ನು ಸ್ಮರಿಸಿಕೊಂಡರು. ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷರಾದ ಭಾಸ್ಕರ ರೈ ಕುಕ್ಕುವಳ್ಳಿ ಸುಂದರ ರಾವ್ ಅವರ ಅಭಿನಂದನಾ ಭಾಷಣ ಮಾಡಿದರು.
ಸಮಾರೋಪದ ಸಭಾಧ್ಯಕ್ಷರಾದ ಡಾ.ಮುರಳೀಧರ ಶೆಟ್ಟಿ ಅವರು ಯಕ್ಷಗಾನ ಕಲೆಯನ್ನು ಉಳಿಸುವುದು, ಬೆಳೆಸುವುದು ನಮ್ಮ ಹೊಣೆ ಎಂಬ ಕರೆಯೊಂದಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ವಿಶ್ವನಾಥ ಎಂ.ಕೆ., ದೇವಸ್ಥಾನದ ಮೊಕ್ತೇಸರರಾದ ಕೃಷ್ಣ ಕುಮಾರ್ ಯು, ಕಾರ್ಯನಿರ್ವಹಣಾ„ಕಾರಿ ಉಮೇಶ್, ಯಕ್ಷಗಾನ ಸಂಘಟಕರಾದ ಸತೀಶ್ ಅಡಪ ಸಂಕಬೈಲು ಮತ್ತು ಸೋಮನಾಥ ಕಾರಂತ ಶುಭಹಾರೈಸಿದರು.
ಅವಿನಾಶ್ ಹೊಳ್ಳ ಸ್ವಾಗತಿಸಿದರು. ಗುರುರಾಜ್ ಕೋಳ್ಯೂರು ವಂದಿಸಿದರು. ದೀಕ್ಷಿತಾ ಕೋಳ್ಯೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಾಗಣಪತಿ ಶಂಕರನಾರಾಯಣ ಸಾಂಸ್ಕøತಿಕ ಕಲಾ ಪ್ರತಿಷ್ಠಾನದಲ್ಲಿ ರಮೇಶ್ ಶೆಟ್ಟಿ ಬಾಯಾರು ಅವರಿಂದ ಯಕ್ಷಗಾನ ತರಬೇತಿ ಪಡೆಯುತ್ತಿರುವ ಮಕ್ಕಳಿಂದ ಶ್ರೀ ಕೃಷ್ಣ ಲೀಲೆ-ಕಂಸ ವಧೆ ಮತ್ತು ಬಬ್ರುವಾಹನ ಕಾಳಗ ವೆಂಬ ಯಕ್ಷಗಾನ ಬಯಲಾಟ ಜರಗಿತು.

