ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅ.21 ರಂದು ನಡೆಯಲಿದ್ದು, ಬಿಗು ಬಂದೋಬಸ್ತು ಏರ್ಪಡಿಸಿದ್ದು, ಸೆಂಟ್ರಲ್ ಇಂಡಸ್ಟ್ರೀಸ್ ಸೆಕ್ಯೂರಿಟಿ ಫೆÇೀರ್ಸ್(ಸಿಐಎಸ್‍ಎಫ್) ನ ಒಂದು ತುಕಡಿ ಮತ್ತು ಇಂಟರ್‍ನಲ್ ರಿಸರ್ವ್ ಬೆಟಾಲಿಯನ್‍ನ ಒಂದು ತುಕಡಿ ಈಗಾಗಲೇ ಮಂಜೇಶ್ವರಕ್ಕೆ ತಲುಪಿದೆ.
ಈ ಎರಡೂ ಪಡೆಯನ್ನು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಸೂಕ್ಷ್ಮ ಸಂವೇದಿ ಪ್ರದೇಶಗಳಲ್ಲಿ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಗಡಿಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಇಂತಹ ಇನ್ನೂ ಎರಡು ತುಕಡಿಗಳು ಒಂದೆರಡು ದಿನಗಳಲ್ಲಿ ಬರಲಿದೆ.
ಅಗತ್ಯವೆನಿಸಿದ್ದಲ್ಲಿ ಅಗತ್ಯದಷ್ಟು ಕೇಂದ್ರ ಪಡೆಯನ್ನು ನಿಯೋಗಿಸಲಾಗುವುದೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಟೀಕಾರಾಮ್ ಮೀಣ ತಿಳಿಸಿದ್ದಾರೆ. ಇದರ ಹೊರತಾಗಿ ಅ.14 ರಿಂದ ಕಲ್ಲಿಕೋಟೆ ಮತ್ತು ವಯನಾಡು ಜಿಲ್ಲೆಗಳ ಹಿರಿಯ ಪೆÇಲೀಸ್ ಅಧಿಕಾರಿಗಳು ಸಹಿತ ಪೆÇಲೀಸ್ ತಂಡಗಳೂ ಮಂಜೇಶ್ವರಕ್ಕೆ ಬರಲಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 198 ಮತಗಟ್ಟೆಗಳಿದ್ದು, ಈ ಪೈಕಿ 101 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಸಂವೇದಿ ಪ್ರದೇಶಗಳನ್ನಾಗಿ ಗುರುತಿಸಲಾಗಿದೆ. ಇದರಲ್ಲಿ 17 ಮತಗಟ್ಟೆಗಳು ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿದೆ.


