ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 2019-20ನೇ ಶೈಕ್ಷಣಿಕ ವರ್ಷದ ಶಾಲಾ ಕಲೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಬೆಳ್ಳೂರು ಪಂಚಾಯಿತಿ ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ.ಉದ್ಘಾಟಿಸಿದರು. ಪ್ರಾಂಶುಪಾಲೆ ಸುಧಾ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ಎನ್. ಎಚ್.ಮೊಹಮ್ಮದ್ ಶುಭ ಹಾರೈಸಿದರು.ವ್ಯವಸ್ಥಾಪನಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಶಿಧರ ಗೋಳಿಕಟ್ಟೆ, ಮಾತೃ ಸಂಘ ಅಧ್ಯಕ್ಕೆ ಶಾಂತಾಕುಮಾರಿ, ಸದಸ್ಯ ಹಮೀದ್ ಉಪಸ್ಥಿತರಿದ್ದರು.
ಶಿಕ್ಷಕಿ ಜಯರಂಜಿತಾ ಪ್ರಾರ್ಥಿಸಿದರು.ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಸ್ವಾಗತಿಸಿ, ಕಲೋತ್ಸವ ಸಂಚಾಲಕಿ ಜಲಜಾಕ್ಷಿ ವಂದಿಸಿದರು.ದಾಸಪ್ಪ ಮಾಸ್ತರ್ ನಿರೂಪಿಸಿದರು.ಬಳಿಕ ವಿದ್ಯಾರ್ಥಿಗಳಿಂದ ಹಲವು ಸಾಂಸ್ಕøತಿಕ ಪ್ರತಿಭೆಗಳ ಸ್ಪರ್ಧೆಗಳು ನಡೆಯಿತು.


