HEALTH TIPS

ಸಂಗೀತವು ಸಕಲ ರೋಗಗಳಿಗೆ ದಿವ್ಯೌಷಧ : ವಸಂತ ಪೈ ಬದಿಯಡ್ಕ- ಸುನಾದ ಸಂಗೀತ ಕಲಾ ಶಾಲೆಯ `ಸಂಗೀತೋತ್ಸವ 2019'ನ್ನು ದೀಪ ಬೆಳಗಿಸಿ ಉದ್ಘಾಟನೆ


       ಬದಿಯಡ್ಕ: ವೈವಿಧ್ಯ ಸ್ವರ ಶೃಂಖಲೆಗಳನ್ನು ಸೃಷ್ಟಿಸುವ ಸಂಗೀತ ದೇವ ಪ್ರಿಯವೆಂಬ ಪ್ರತೀತಿ ಇದೆ. ಸತತವಾಗಿ ಸಂಗೀತವನ್ನು ಅಭ್ಯಸಿಸುವುದರಿಂದ ಪ್ರತೀ ಹೆಜ್ಜೆ ಹೆಜ್ಜೆಯಲ್ಲಿಯೂ ಭಗವಂತನನ್ನು ಕಾಣಲು ಸಾಧ್ಯವಿದೆ. ಸಂಗೀತದ ಮೂಲಕ ದೇವರ ನಾಮ ಸ್ಮರಣೆಯಿಂದ ಜೀವನ ಪಾವನವಾಗಲಿದೆ. ಸಂಗೀತಾರ್ಚನೆ ಎಂದರೆ ಪುಣ್ಯಕಾರ್ಯವಾಗಿದ್ದು, ಮುಗ್ದ ಮಕ್ಕಳಿಗೆ ದೇವರು ಸಂಗೀತದ ಮೂಲಕ ಒಲಿಯುತ್ತಾನೆ. ಸಂಗೀತವು ಸಕಲ ರೋಗಗಳಿಗೆ ದಿವ್ಯೌಷಧವಾಗಿದೆ ಎಂದು ಉದ್ಯಮಿ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅಭಿಪ್ರಾಯಪಟ್ಟರು.
      ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಭಾನುವಾರ ಜರಗಿದ ಸುನಾದ ಸಂಗೀತ ಕಲಾ ಶಾಲೆ ಬದಿಯಡ್ಕ ಇದರ ವಾರ್ಷಿಕೋತ್ಸವ `ಸಂಗೀತೋತ್ಸವ 2019'ನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
     ಸುನಾದ ಸಂಗೀತ ಕಲಾಶಾಲೆಯ ಅಧ್ಯಕ್ಷ ಶಾಮಪ್ರಸಾದ್ ಕಬೆಕೋಡು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದರು.
    ಸಂಗೀತ ಗುರುಗಳಾದ ವಿದ್ವಾನ್ ವಾಣಿಪ್ರಸಾದ್ ಕಬೆಕ್ಕೋಡು ಮತ್ತು ಬಳಗದವರಿಂದ ಪಂಚರತ್ನ ಗೋಷ್ಠಿ ಗಾಯನ ನಡೆಯಿತು.  ವಿದ್ಯಾರ್ಥಿಗಳು ಗುರುವಂದನೆಯೊಂದಿಗೆ ಸಂಗೀತ ಕಾರ್ಯಕ್ರಮ ಆರಂಭಿಸಲಾಯಿತು. ಪಕ್ಕವಾದ್ಯದಲ್ಲಿ ಪಿಟೀಲು ವತ್ತು ಮೃದಂಗದಲ್ಲಿ ವಿದ್ವಾನ್ ಪ್ರಛಾಕರ ಕುಂಜಾರು ಕು. ಧನ್ಯಶ್ರೀ ಪುತ್ತೂರು, ವೆಂಕಟ ಯಶಸ್ವಿ ಕಬೆಕ್ಕೋಡು, ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries