ಬದಿಯಡ್ಕ: ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಅವಲೋಕನ ಸಭೆಯು ನೀರ್ಚಾಲು ಪ್ರಾದೇಶಿಕ ಸಮಿತಿ ಕಚೇರಿಯಲ್ಲಿ ಇತ್ತೀಚೆಗೆ ಜರಗಿತು. ಸಮಿತಿಯ ಅಧ್ಯಕ್ಷ ವಸಂತ ಅಜೆಕ್ಕೋಡು ಅಧ್ಯಕ್ಷತೆ ವಹಿಸಿದ್ದರು. ಇದುವರೆಗಿನ ಚಟುವಟಿಕೆಗಳ ಬಗ್ಗೆ ಅವರು ಮಾತನಾಡಿ ಎಲ್ಲರ ಸಹಕಾರವನ್ನು ಕೋರಿದರು. ಗೌರವಾಧ್ಯಕ್ಷ ಆನಂದ ಕೆ. ಮವ್ವಾರು, ಸಲಹಾ ಸಮಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಕೃಷ್ಣ ಧರ್ಬೆತ್ತಡ್ಕ. ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಪದಾಧಿಕಾರಿಗಳಾದ ರಾಮ ಪಟ್ಟಾಜೆ, ಸುಂದರ ಮಾಳಂಗೈ, ಹರೀಶ್ಚಂದ್ರ ಪುತ್ತಿಗೆ ಭಾಗವಹಿಸಿದ್ದರು.
ಶ್ರೀ ಮದನಂತೇಶ್ವರ ದೇವರ ಮೂಲ ಸ್ಥಾನದಲ್ಲಿ ಮದರು ಮಹಾಮಾತೆಯ ಆರಾಧನೆಗೆ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಸ್ಪಂದಿಸಿದ ಜೀರ್ಣೋದ್ಧಾರ ಸಮಿತಿಗೆ ಸಹಕಾರ ನೀಡಲು ತೀರ್ಮಾನಿಸಲಾಯಿತು. ಸಮಾಜದ ವಿಧ್ಯಾರ್ಥಿಗಳಿಗೆ ಮತ್ತು ಯುವಜನರಿಗೆ ಸರಕಾರಿ ಸವಲತ್ತುಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ದೆಹಲಿಯಲ್ಲಿ ನಡೆಯುವ ಸಾಹಿತ್ಯ ಸಾಂಸ್ಕøತಿಕ ಉತ್ಸವದಲ್ಲಿ ನಾಲ್ಕನೇ ಬಾರಿ ಭಾಗವಹಿಸಲು ತೆರಳುತ್ತಿರುವ ಮೊಗೇರ ಸಮಾಜದ ಹಿರಿಯ ಕವಿ ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕರವರನ್ನು ಅಭಿನಂದಿಸಲಾಯಿತು. ಮದರು ಮಹಾಮಾತೆ ಮೊಗೇರ ಸಮಾಜದ ಪ್ರಧಾನ ಕಾರ್ಯದರ್ಶಿ ಶಂಕರ ಡಿ ದರ್ಭೆತ್ತಡ್ಕ ಸ್ವಾಗತಿಸಿ, ಸುರೇಶ್ ಅಜೆಕ್ಕೋಡು ವಂದಿಸಿದರು.





