ಕುಂಬಳೆ: ಮುಜುಂಗಾವಿನ ಶ್ರೀಭಾರತೀ ವಿದ್ಯಾಪೀಠದಲ್ಲಿ ವಿಜಯದಶಮಿಯಂದು ಕೋಣಮ್ಮೆ ಮಹಾದೇವ ಭಟ್ ಅವರು ಸರಸ್ವತಿ ಪೂಜೆ, ಪುಟ್ಟ ಮಕ್ಕಳಿಗೆ ವಿದ್ಯಾರಂಭ,ಗ್ರಂಥಾಲಯದಲ್ಲಿ ಪೂಜೆ, ಕಂಪ್ಯೂಟರ್ ಲ್ಯಾಬಿನಲ್ಲಿ ಹಾಗೂ ಶಾಲಾ ವಾಹನಗಳಿಗೆ ಪೂಜಾದಿಗಳೊಂದಿಗೆ ಉತ್ಸವ ನಡೆಯಿತು.
ಶಾಲಾ ಮಕ್ಕಳಿಂದ ಭಜನೆ, ಶ್ರೀ ಲಕ್ಷ್ಮೀನರಸಿಂಹ ಸ್ತೋತ್ರ ಹಾಗೂ ಕುಂಬಳೆ ವಲಯದ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಬಳಿಕ ಎಲ್ಲರಿಗೂ ಸಿಹಿ ಹಾಗೂ ಪಾನಕ ವಿತರಿಸಲಾಯಿತು.





