ಫಿರೋಜ್ ಪೇರರ್(ಪಂಜಾಬ್): ಪಂಜಾಬ್ ನಲ್ಲಿ ಪಾಕಿಸ್ತಾನದ ಮತ್ತೊಂದು ಡ್ರೋನ್ ಹಾರಾಟ್ ನಡೆಸಿರುವುದು ಕಂಡ ಬಂದಿದೆ.
ಪಂಜಾಬ್ ನ ಫಿರೋಜ್ ಪೇರರ್ ಜಿಲ್ಲೆಯ ಹಜಾರೆ ಸಿಂಗ್ ವಾಲಾ ಎಂಬದಲ್ಲಿ ಅಕ್ಟೋಬರ್ 14ರಂದು ಪಾಕ್ ಡ್ರೋನ್ ಕಾಣಿಸಿಕೊಂಡಿದ್ದಾಗಿ ಗಡಿ ಭದ್ರತಾ ಪಡೆ(ಬಿಎಎಸ್ ಎ ಫ್ಫ್ ) ಆರೋಪಿಸಿದೆ. 370ನೇ ವಿಧಿ ರದ್ದತಿ ನಂತರ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿರುವ ಪಾಕಿಸ್ತಾನ ತನ್ನ ಡ್ರೋನ್ ಗಳ ಮೂಲಕ ಭಾರತದಲ್ಲಿರುವ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಿದೆ ಎನ್ನಲಾಗಿದೆ. ಜಂಟಿ ಡ್ರೋನ್ ಟೆಕ್ನಾಲಜಿ ಬಳಸಿಕೊಂಡು ಭಾರತ ಡ್ರೋನ್ ಗಳ ಪತ್ತೆ ಮತ್ತು ಹೊಡೆದುರುಳಿಸುವ ಕೆಲಸಕ್ಕೆ ಮುಂದಾಗಲಿದೆ.


