ಪೆರ್ಲ: ನಿತ್ಯೋಪಯೋಗಿ ಸಾಮಾಗ್ರಿಗಳ ಬೇಲೆ ಏರಿಕೆ, ಅಮಿತ ತೆರಿಗೆ ವಸೂಲಿ ಮೊದಲಾದ ಜನದ್ರೋಹ ನಿಲುವಿನೊಂದಿಗೆ ಕೇಂದ್ರ ರಾಜ್ಯ ಸರ್ಕಾರಗಳ ಆಡಳಿತದ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಇದರಿಂದ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ರಮೆಶ್ ಚೆನ್ನಿತ್ತಲ ಆರೋಪಿಸಿದರು.
ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಅವರ ಚುನಾವಣಾ ಪ್ರಚಾರಾರ್ಥ ಪೆರ್ಲ ಬಣ್ಪುತ್ತಡ್ಕದಲ್ಲಿ ನಡೆದ ಯುಡಿಎಫ್ ಕುಟುಂಬ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಜೇಶ್ವರದಲ್ಲಿ ಐಕ್ಯರಂಗ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಐಕ್ಯ ರಂಗ ಅಭ್ಯರ್ಥಿಯ ಬಹು ಮತಗಳ ಗೆಲುವಿಗೆ ಕಾರ್ಯಕರ್ತರು ಸಂಘಟಿತರಾಗಿ ದುಡಿಯಬೇಕು. ಜಾತ್ಯತೀತ ನಿಲುವುಗಳಿಗೆ ಬದ್ಧರಾದ ಮಂಜೇಶ್ವರ ಜನತೆ ಐಕ್ಯರಂಗದ ಅಭ್ಯರ್ಥಿಯನ್ನು ಚುನಾಯಿಸಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್,ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ ಕಾರ್ಯಧ್ಯಕ್ಷ ಕೊಡಿಕ್ಕುನ್ನಿಲ್ ಸುರೇಶ್, ಸದಸ್ಯ ಅಶ್ರಫ್ ಅಲಿ, ಕಣ್ಣೂರು ಜಿಲ್ಲಾ ಕಾಂಗ್ರೆಸ್ಸ್ ಮಾಜಿ ಅಧ್ಯಕ್ಷ ಕೆ.ಸುರೇಂದ್ರನ್, ಮನ್ನಾರ್ಕಾಡ್ ಶಾಸಕ ಸಂಶುದ್ದೀನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಶೀರ್, ಕರ್ನಾಟಕ ಮಾಜಿ ಸಚಿವ ರಮಾನಾಥ ರೈ, ಮಾಜಿ ಸಂಸದ ವಿನಯಕುಮಾರ್ ಸೊರಕೆ, ಮಂಗಳೂರು ಮಾಜಿ ಶಾಸಕ ಜೆ.ಆರ್.ಲೋಬೋ, ಸುರತ್ಕಲ್ ಮಾಜಿ ಶಾಸಕ ಮೊಯಿದ್ದೀನ್ ಬಾವಾ, ಮುಖಂಡರಾದ ಶಾರದಾ ವೈ., ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಎಣ್ಮಕಜೆ ಯುಡಿಎಫ್ ಜನ ಪ್ರತಿನಿಧಿ, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಎಣ್ಮಕಜೆ ಪಂಚಾಯಿತಿ ಸಮಿತಿ ಸಂಚಾಲಕ ಅಬೂಬಕ್ಕರ್ ಪೆರ್ದನೆ ಸ್ವಾಗತಿಸಿ, ಅಧ್ಯಕ್ಷ ಬಿ.ಎಸ್.ಗಾಂಭೀರ ವಂದಿಸಿದರು.





