ಕುಂಬಳೆ: ಕೋಟೆಕ್ಕಾರ್ ಸುವರ್ಣ ಕುಟುಂಬಸ್ಥರ ತರವಾಡು ಮನೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀಧೂಮಾವತಿ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯ ಮಂಗಳವಾರನೆರವೇರಿತು. ಶ್ರೀಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಮಹಾದೇವ ಭಟ್ ಪಡುಕೋಣಮ್ಮೆ ಅವರು ದೈವಿಕ ವಿಧಿ ವಿಧಾನಗಳೊಂದಿಗೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಿಲಾನ್ಯಾಸ ಕಾರ್ಯವನ್ನು ರಮೇಶ್ ಕಾರಂತ ಬೆದ್ರಡ್ಕ ಅವರು ನೆರವೇರಿಸಿದರು ಕಾರ್ಯಕ್ರಮದಲ್ಲಿ ಕೋಟೆಕ್ಕಾರ್ ರಾಜಂದೈವ ಶ್ರೀ ಧೂಮಾವತಿ ದೈವಸ್ಥಾನದ ಪ್ರಧಾ ಅರ್ಚಕ ಲಿಂಗಪ್ಪ ಪೂಜಾರಿ, ದೈವಸ್ಥಾನದ ನಿರ್ಮಾಣದ ಶಿಲ್ಪಿ ಶಶಿ ಬೇಕಲ್, ಚಂದ್ರಹಾಸ ಆಚಾರ್ಯ, ಅಮ್ಮು ಪೂಜಾರಿ, ಕುಟ್ಟಿ ಪೂಜಾರಿ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.





