ಕಾಸರಗೋಡು: ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿ ಪೋಲಿಂಗ್ ಸಿಬ್ಬಂದಿಗೆ ಅತ್ಯುತ್ತಮ ಸೌಲಭ್ಯ ಒದಗಿಸುವ ಮೂಲಕ ಜಿಲ್ಲಾಡಳಿತೆ ಈ ಬಾರಿ ಸುಧಾರಿತ ಚುನಾವಣೆ ಪ್ರಕ್ರಿಯೆಗೆ ನಾಂದಿ ಹಾಡಲಿದೆ.
ಮಂಗಳವಾರ ಜಿಲ್ಲಾಧಿಕಾರಿ ಅವರ ಛೇಬರ್ ನಲ್ಲಿ ನಡೆದ ಸಭೆ ಈ ವಿಚಾರ ಪ್ರಕಟಿಸಿದ್ದು, ಸಿದ್ಧತೆಗಳಿಗೆ ಅಂತಿಮ ರೂಪು ನೀಡಿದೆ. ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷತೆ ವಹಿಸಿದ್ದರು. ಪೋಲಿಂಗ್ ಸಾಮಾಗ್ರಿಗಳ ವಿತರಣೆ-ಸ್ವೀಕಾರ ಕೇಂದ್ರವಾಗಿರುವ ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಪೈವಳಿಕೆ ನಗರದ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಸಾಮಾಗ್ರಿಗಳ ಪೂರೈಕೆಯಾಗಲಿದ್ದು, ಅ.20ರಂದು ಬೆಳಗ್ಗೆ 6 ಗಂಟೆಗೆ ಸಂಬಂಧಪಟ್ಟ ಸಿಬ್ಬಂದಿ ಹಾಜರಾಗಲು ಬೇಕಾದ ಸೌಲಭ್ಯ ಏರ್ಪಡಿಸಲಾಗಿವುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಳ ಬಳಿಯ ಕೈಕಂಬದಿಂದ ಪೈವಳಿಕೆ ಶಾಲೆಗೆ ಸಿಬ್ಬಂದಿಯನ್ನು ತಲಪಿಸಲು ಕೆ.ಎಸ್.ಆರ್.ಟಿ.ಸಿ. ಬಸ್ ಗಳ ವಿಶೇಷ ಚೈನ್ ಸರ್ವೀಸ್ ಇರುವುದು.
ಮತದಾನಕ್ಕಿರುವ ಸಲಕರಣೆಗಳನ್ನು ಮರಳಿ ಸ್ಟ್ರಾಂಗ್ ರೂಂಗೆ ತಲಪಿಸುವ ನಿಟ್ಟಿನಲ್ಲಿ ಅ.21ರಂದು ಸಂಜೆ 7 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಕೈಕಂಬಕ್ಕೆ ಬಸ್ ಚೈನ್ ಸರ್ವೀಸ್ ಇರುವುದು. ದೀರ್ಘಗಾಮಿ ಬಸ್ ಗಳು ಈ ಸಮಯಾವಧಿಯಲ್ಲಿ ಕೈಕಂಬದಲ್ಲಿ ನಿಲುಗಡೆಹೊಂದುವಂತೆ ಮೋಟಾರು ವಾಹನ ಇಲಾಖೆ ಮತ್ತು ಕೆ.ಎಸ್.ಆರ್.ಟಿ.ಸಿ.ಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಇದಕ್ಕಾಗಿ ಕೆ.ಎಸ್.ಆರ್.ಟಿ.ಸಿ. ಇನ್ಸ್ ಪೆಕ್ಟರರನ್ನು ನೇಮಿಸಲಾಗುವುದು.
ನೇಮಕಗೊಂಡ ಪೋಲಿಂಗ್ ಬೂತ್ ಆನ್ ಲೈನ್ ಮೂಲಕ ಪತ್ತೆಮಾಡಬಹುದಾದ ರೀತಿಯ ನೂತ್ ಲೋಕೆಟ್ ???ಪ್ ಸಿದ್ಧಪಡಿಸಲಾಗಿದೆ. ಇದು ಎಲ್ಲ ಪೋಲಿಂಗ್ ಸಿಬ್ಬಂದಿಗೆ, ಪ್ಲೇಸ್ಟೋರ್ ನಿಂದ ಡೌನ್ ಲೋಡ್ ನಡೆಸಿ ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತಗಟ್ಟೆಗಳ ಪತ್ತೆ ಸುಲಭವಾಗಿಸುವ ಬೂತ್ ಲೊಕೇಟರ್:
ಚುನಾವಣೆ ಕರ್ತವ್ಯದಲ್ಲಿರುವ ಸಿಬ್ಬಂದಿ ಮತ್ತು ಮತದಾತರು ಮತಗಟ್ಟೆಗಳನ್ನು ಸುಲಭದಲ್ಲಿ ಪತ್ತೆ ಮಾಡಬಹುದಾದ ರೀತಿ ಸಿದ್ಧಪಡಿಸಲಾದ ಕ್ಯೂ.ಆರ್. ಆಪ್ ನ್ನು ಬಳಸಬಹುದಾಗಿದೆ.
ದೇಶದಲ್ಲೇ ಪ್ರಥಮ ಬಾರಿಗೆ ಕಾಸರಗೋಡು ಜಿಲ್ಲೆಯಲ್ಲಿ ಕ್ಯೂ.ಆರ್.ತಂತ್ರ ಜ್ಞಾ ನವನ್ನು ಕಳೆದ ಬಾರಿಯ ಲೋಕಸಭೆ ಚುನಾವಣೆ ವೇಳೆ ಬಳಸಲಾಗಿದೆ. ಈ ಮೂಲಕ ಮತಗಟ್ಟೆಯಿರುವ ಪ್ರದೇಶದ ಪತ್ತೆ ಮತ್ತು ಸಮಗ್ರ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪತ್ತೆ ಮಾಡಬಹುದಾಗಿದೆ.
ಜಿಲ್ಲಾಧಿಕಾರ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ ಫೀನೆಕ್ಸ್ ಸ್ಟ್ ಇನ್ನವೇಶನ್ ಎಂಬ ಸ್ಟಾರ್ಟ್ ಅಪ್ ಕಂಪನಿ ಯೋಜನೆಗೆ ಬೇಕಾದ ಮೊಬೈಲ್ ಅಪ್ಲಿಕೇಷನ್ ನಿರ್ಮಿಸಿದೆ. ಆಂಡ್ರಾಯಿಡ್ ಪ್ಲಾಟ್ ಫಾರಂನ ಗೂಗಲ್ ಪ್ಲೇ ಸ್ಟೋರ್ ನಿಂದ ಬೂತ್ ಲೊಕೇಟ್ ಕೆಎಸ್ಡಿ ಎಂಬ ಅಪ್ಲಿಕೇಷನ್ ಮೊದಲು ಡೌನ್ ಲೋಡ್ ನಡೆಸಬೇಕು. ಚುನಾವಣೆಯ ಕರ್ತವ್ಯದ ಸಿಬ್ಬಂದಿ ತಮಗೆ ಲಭಿಸುವ ಕ್ಯೂ.ಆರ್.ಕೋಡ್ ಮೊಬೈಲ್ ???ಪ್ ಮೂಲಕ ಸ್ಕ್ಯಾನ್ ನಡೆಸಿದರೆ ಸಾಕು, ತಕ್ಷಣ ಮತಗಟ್ಟೆಗೆ ಸಂಬಂಧಿಸಿದ ಮಾಹಿತಿ ಪ್ರತ್ಯಕ್ಷವಾಗುತ್ತದೆ. ಮತಗಟ್ಟೆ ಇರುವ ಜಾಗ, ಇನ್ನಿತರ ಮಾಹಿತಿಗಳು, ಕ್ಷೇತ್ರದ ಕುರಿತಾದ ಇನ್ನಿತರ ವಿಚಾರಗಳು ಲಭಿಸಲು ಸಾಧ್ಯವಾಗುತ್ತದೆ. ಜೊತೆಗೆ ಜಿ.ಪಿ.ಎಸ್.ಸೌಲಭ್ಯದ ಸಹಾಯದೊಂದಿಗೆ ಗೂಗಲ್ ಮ್ಯಾಪ್ ನೊಂದಿಗೆ ಜೋಡಿಸಿ ಸುಲಭದಲ್ಲಿ ಎಲ್ಲ ಹಾದಿಗಳೂ ಲಭ್ಯವಾಗುವ ಮೂಲಕ ಮತಗಟ್ಟೆಗೆ ತಲಪುವುದು ಸಾಧ್ಯವಾಗುತ್ತದೆ.
ಪ್ರತಿ ಮತಗಟ್ಟೆಗೂ ಪ್ರತ್ಯೇಕ ರೀತಿ ರಚಿಸಲಾದ ಕ್ಯೂ.ಆರ್.ಕೋಡ್ ಗಳು ಜಿಲ್ಲಾಧಿಕಾರಿ ಅವರ ವೆಬ್ ಸೈಟ್ ಮೂಲಕ ಲಭಿಸಲಿದೆ. ಮತಗಟ್ಟೆಗಳಿಗೆ ಮಂಜೂರು ಮಾಡಿರುವ ಯು.ಐ.ಡಿ.ನಂಬ್ರನೀಡಿ ಸಾರ್ವಜನಿಕರೂ ಈ ಅಪ್ಲಿಕೇಷನ್ ಮೂಲಕ ಮತಗಟ್ಟೆಗಳ ಮಾಹಿತಿ ತಿಳಿಸುಕೊಳ್ಳಬಹುದು. ಬಹುತೇಕ ವೇಳೆ ಇತರ ಜಿಲ್ಲೆಗಳ ಸಿಬ್ಬಂದಿ ಕಾಸರಗೋಡಿನಲ್ಲಿ ಕರ್ತವ್ಯದಲ್ಲಿರುವ ಹಿನ್ನೆಲೆಯಲ್ಲಿ ಈ ಸೌಲಭ್ಯ ಕಳೆದ ಲೋಕಸಭೆ ಚುನಾವಣೆಯ ವೇಳೆ ಪ್ರಯೋಜನಕಾರಿಯಾಗಿತ್ತು.
ಉಪಚುನಾವಣೆ: ಕರ್ತವ್ಯದ ಸಿಬ್ಬಂದಿಗೆ ಆಹಾರ ಒದಗಿಸಲಿರುವ ಕುಟುಂಬಶ್ರೀ:
ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಅಂಗವಾಗಿ ಮತಗಟ್ಟೆಗಳಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಹೊತ್ತಿನ ಆಹಾರ ಒದಗಿಸುವ ಹೊಣೆಯನ್ನು ಕುಟುಂಬಶ್ರೀ ವಹಿಸಿಕೊಂಡಿದೆ.
ಕುಡಿಯುವ ನೀರು, ಉಪಹಾರ, ಭೋಜನ ಇತ್ಯಾದಿಗಳನ್ನು ಆಯಾ ಹೊತ್ತಗೆ ಸರಿಯಾಗಿಯೇ ಸಂಘಟನೆ ಆಯಾ ಮತಗಟ್ಟೆಗಳಿಗೆ ತಲಪಿಸಲಿದೆ. ಜೊತೆಗೆ ಮತಗಟ್ಟೆಗಳ ಶುಚಿತ್ವದ ಹೊಣೆಯನ್ನೂ ಕುಟುಂಬಶ್ರೀ ವಹಿಸಿಕೊಂಡಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಮತದಾನ ನಡೆಯುವ ಪ್ರದೇಶಗಳಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಆಹಾರ ಲಭ್ಯತೆ ಕಷ್ಟಕರವಾಗುತ್ತಿರುವ ವಿಚಾರವನ್ನು ಗಮನಿಸಿ ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬುಅವರ ಆದೇಶ ಪ್ರಕಾರ ಈ ಸೌಲಭ್ಯ ಒದಗಿಸಲಾಗುತ್ತಿದೆ.
ಕರ್ತವ್ಯದ ಹಿನ್ನೆಲೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುವ ಸಿಬ್ಬಂದಿಗೆ ದಿನದ 5 ಹೊತ್ತಿನ ಆಹಾರ, ಪಾನೀಯಗಳನ್ನು ಮಿತದರದಲ್ಲಿ ಕುಟುಂಬಶ್ರೀ ಪೂರೈಸಲಿದೆ. ಅ.20ರಂದು ಸಂಜೆ ಮತಗಟ್ಟೆಗಳಿಗೆ ಆಗಮಿಸುವ ಸಿಬ್ಬಂದಿಗೆ 4 ಗಂಟೆಗೆ ಚಹಾ, ಲಘು ಉಪಹಾರ, ರಾತ್ರಿ 8.30ಕ್ಕೆ ಭೋಜನ ವಿತರಿಸಲಾಗುವುದು. ಮರುದಿನ ಬೆಳಗ್ಗೆ 5.30ಕ್ಕೆ ಚಹಾ, 8.30ಕ್ಕೆ ಬೆಳಗ್ಗಿನ ಉಪಹಾರ, ಮಧ್ಯಾಹ್ನ 1 ಗಂಟೆಗೆ ಭೋಜನ, ಸಂಜೆ 3.30ಕ್ಕೆ ಚಹಾ, ಲಘು ಉಪಹಾರ ನೀಡಲಾಗುವುದು.
ಚುನಾವಣೆ ಪ್ರಕ್ರಿಯೆ ಮುಗಿದು ಮತದಾನ ಯಂತ್ರ ಸಹಿತ ಸಾಮಾಗ್ರಿಗಳನ್ನು ಮರಳಿ ಸ್ವೀಕಾರ ಕೇಂದ್ರಗಳಿಗೆ ತಲಪಿಸುವ ಸಿಬ್ಬಂದಿಗೆ ಬೇಕಾದ ಆಹಾರ ವ್ಯವಸ್ಥೆಯನ್ನೂ ಒದಗಿಸಲಾಗುವುದು.
ಬೆಳಗ್ಗಿನ ಉಪಹಾರದ ಪಟ್ಟಿಯಲ್ಲಿ ಇಡ್ಲಿ, ವಡೆ, ದೋಸೆ, ಪುಟ್, ವೆಳ್ಳಪ್ಪಂ, ಕಡ್ಲೆ, ಸಾಂಬಾರ್ ಇರುವುದು. ಸಿಬ್ಬಂದಿ ಬೇಕಾದುದನ್ನು ಆರಿಸಿಕೊಳ್ಳಬಹುದು. ಮಧ್ಯಾಹ್ನದ ಭೋಜನದ ಪಟ್ಟಿಯಲ್ಲಿ ಸಸ್ಯಾಹಾರಿ ಬಿರಿಯಾನಿ, ಚಿಕ್ಕನ್ ಬಿರಿಯಾನಿ, ಗಂಜಿ-ಚಟ್ನಿ ಇರುವುದು, ರಾತ್ರಿ ಚಪಾತಿ-ಸಸ್ಯಾಹಾರಿ ಕರ್ರಿ, ಅಗತ್ಯವಿದ್ದರೆ ಚುಕ್ ಕಾಫಿ ಒದಗಿಸಲಾಗುವುದು. ಮತಗಣನೆಯ ದಿನದಂದು ಪೈವಳಿಕೆ ನಗರದ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕುಟುಂಬಶ್ರೀ ಆಹಾರದ ವ್ಯವಸ್ಥೆ ಒದಗಿಸಲಿದೆ.


