ಕಾಸರಗೋಡು: ರಾಜ್ಯ ಮಟ್ಟದ ಶಾಲಾ ಕಲೋತ್ಸವ ನ.28ರಿಂದ ಡಿ.1ರ ವರೆಗೆ ಕಾ ಞÂಂ ಗಾಡ್ ನಲ್ಲಿ ನಡೆಯಲಿದ್ದು, ಉದ್ಘಾಟನೆ ಸಮಾರಂಭದಲ್ಲಿ ಆಲಾಪನೆ ನಡೆಸಲಾಗುವ ಸ್ವಾಗತಗೀತೆ ರಚನೆಗಳನ್ನು ಕೋರಲಾಗಿದೆ.
ಕಾಸರಗೋಡು ಜಿಲ್ಲೆಯ ಸಾಂಸ್ಕೃತಿಕ ಹಿನ್ನೆಲೆ, ಭಾಷಾ ವೈವಿಧ್ಯ ಇತ್ಯಾದಿಗಳನ್ನು ಗೀತೆ ಒಳಗೊಂಡಿರಬೇಕು. ಆಯ್ಕೆಗೊಳ್ಳುವ ರಚನೆಗಳ ಕವಿಯನ್ನು ಕಲೋತ್ಸವ ಸಮಾರಮಭದಲ್ಲಿ ಅಭಿನಂದಿಸಲಾಗುವುದು. ರಚನೆ ಅ.25ರ ಮುಂಚಿತವಾಗಿ ಕೆ.ಪದ್ಮನಾಭನ್, ಲಕ್ಷ್ಮಿ, ಉದಿನೂರು, ಕಿನಾತ್ತಿಲ್, ಉದಿನೂರು ಅಂಚೆ-ತ್ರಿಕರಿಪುರ ರಸ್ತೆ, ಕಾಸರಗೋಡು ಜಿಲ್ಲೆ-671310 ಎಂಬ ವಿಳಾಸಕ್ಕೆ ಸಲ್ಲಿಸಬೇಕು.
ಸ್ವಾಗತ ಗಾಯನದಲ್ಲಿ ಶಿಕ್ಷಕರು ಭಾಗವಹಿಸಬಹುದು:
ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಸ್ವಾಗತ ಗಾಯನಕ್ಕೆ ಹಿರಿಯ ಗಾಯಕ ಕಾ ಞÂ ಂಗಾಡ್ ರಾಮಚಂದ್ರನ್ ನಿರ್ದೇಶನ ನಡೆಸಲಿದ್ದಾರೆ. 60 ಮಂದಿ ಗಾಯಕರಾಗಿರುವ ಶಿಕ್ಷಕರನ್ನು ಬಳಸಿ ಸಾಮೂಹಿಕವಾಗಿ ಆಲಾಪನೆ ನಡೆಯಲಿದೆ. ಜಿಲ್ಲೆಯಲ್ಲಿ ಹೈಯರ್ ಸೆಕೆಂಡರಿ ಶಾಲೆ ವರೆಗಿನ ಸಾರ್ವಜನಿಕ ಶಿಕ್ಷಣಾಲಯಗಳಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಶಿಕ್ಷಕರು ಭಾಗವಹಿಸಬಹುದು. ಆಸಕ್ತ ಶಿಕ್ಷಕರು ಅ.22ರಂದು ಬೆಳಗ್ಗೆ 11 ಗಂಟೆಗೆ ಕಾ ಞÂ ಂಗಾಡ್ ಎ.ಸಿ.ಕಣ್ಣನ್ ನಾಯರ್ ಪಾರ್ಕ್ ನಲ್ಲಿ ನಡೆಯುವ ಆಯ್ಕೆಯಲ್ಲಿ ಭಾಗವಹಿಸಬಹುದು.

