ಮಂಜೇಶ್ವರ: ಕೊಲ್ಲಂಗಾನದ ಶ್ರೀದುರ್ಗಾಪರಮೇಶ್ವರಿ ಸಂಚಾರಿ ಯಕ್ಷಗಾನ ಮಂಡಳಿ, ಚಿಕ್ಕಮೇಳ ಇದರ 1864 ನೇ ಪ್ರದರ್ಶನ ಹೊಸಂಗಡಿ ಬಳಿಯ ಪೊಸೋಟ್ ಪೆಟ್ರೋಲ್ ಪಂಪ್ ಬಳಿ ವಾಸಿಸುತ್ತಿರುವ ಕುಡಾಲ್ ಲಕ್ಷ್ಮಣ ಆಚಾರ್ಯ ಇವರ ಮನೆಯಲ್ಲಿ ಶನಿವಾರ ರಾತ್ರಿ ನಡೆಯಿತು. ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗದ ಕಥಾನಕವನ್ನು ಆಡಿ ತೋರಿಸಿದರು. ಭಾಗವತರಾಗಿ ಸುರೇಶ್ ಆಚಾರ್ಯ ನೀರ್ಚಾಲ್, ಚೆಂಡೆ - ಮದ್ದಳೆಯಲ್ಲಿ ಯೋಗೀಶ್ ಕಡಂಬಳಿತ್ತಾಯ, ಗಿರೀಶ್ ಮುಳಿಯಾರ್, ಪಾತ್ರ ವರ್ಗದಲ್ಲಿ ಕ್ಷೇತ್ರ ಪಾಲನಾಗಿ ಕೃಷ್ಣ ರೈ ನೀರ್ಚಾಲ್, ದೇವಿಯಾಗಿ ಬಾಲಕೃಷ್ಣ ಸೀತಾಂಗೋಳಿ, ಸಹಕರಿಸಿದರು. ಕೃಷ್ಣ ರೈ ನೀರ್ಚಾಲ್ ತಂಡದ ನೇತೃತ್ವವನ್ನ ವಹಿಸಿದ್ದು, ಮುರಳಿ ಕಳತ್ತೂರು, ಹರೀಶ್ ಆಚಾರ್ಯ ಕುಳೂರು ತಂಡದ ಮಾರ್ಗದರ್ಶಕರಾಗಿರುವರು.
ಸಂಚಾರಿ ಯಕ್ಷಗಾನ ತಂಡದಿಂದ ಪೊಸೋಟಿನಲ್ಲಿ ಪ್ರದರ್ಶನ
0
ಅಕ್ಟೋಬರ್ 13, 2019