HEALTH TIPS

ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಸಂಸ್ಕøತಿಯ ಜೀವನಕ್ಕೆ ದಾರಿ : ಪುಷ್ಪಾ ಅಮೆಕ್ಕಳ- ಬದಿಯಡ್ಕದಲ್ಲಿ ಕೇರಳ ಮರಾಟಿ ಶಾರದೋತ್ಸವದ ಸಭಾಕಾರ್ಯಕ್ರಮ ಉದ್ಘಾಟನೆ


     ಬದಿಯಡ್ಕ: ಸಮಾಜದಲ್ಲಿ ಹಿಂದುಳಿದವರನ್ನು ಮೇಲೆತ್ತುವ ಕಾರ್ಯವನ್ನು ಕೈಗೊಂಡಾಗ ಸಂಘಟನೆಗಳು ಮತ್ತಷ್ಟು ಶಕ್ತಿಯುತವಾಗಿ ಪ್ರಗತಿಯನ್ನು ಕಾಣುತ್ತದೆ. ಪ್ರತಿಯೊಬ್ಬನಿಗೂ ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಬೇಕೆಂಬ ಹಂಬಲವಿದ್ದರೆ ಮಾತ್ರ ಜೀವನದಲ್ಲಿ ಏಳಿಗೆಯನ್ನು ಕಾಣಲು ಸಾಧ್ಯ. ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ಪಾಲ್ಗೊಳ್ಳುವ ಮನಸ್ಸು ನಮ್ಮನ್ನು ಸಂಸ್ಕøತಿಯ ಜೀವನಕ್ಕೆ ಕೊಂಡೊಯ್ಯುವಲ್ಲಿ ಕಾರಣವಾಗುತ್ತದೆ. ಶಾರದಾ ಮಾತೆಯ ಅನುಗ್ರಹವನ್ನು ಪಡೆಯಲು ಪುಣ್ಯಮಾಡಿರಬೇಕು ಎಂದು ಕಾಸರಗೋಡು ಜಿಲ್ಲಾಪಂಚಾಯಿತಿ ಸದಸ್ಯೆ ಪುಷ್ಪಾ ಅಮೆಕ್ಕಳ ಅಭಿಪ್ರಾಯಪಟ್ಟರು.
     ಕೇರಳ ಮರಾಟಿ ಶಾರದೋತ್ಸವ ಸಮಿತಿಯ ವತಿಯಿಂದ ಬದಿಯಡ್ಕ ಶ್ರೀ ಗುರುಸದನದಲ್ಲಿ ದಿ. ಆರ್. ಚಕ್ರೇಶ್ವರ ವೇದಿಕೆಯಲ್ಲಿ ಸೋಮವಾರ ಜರಗಿದ 12ನೇ ವರ್ಷದ ಶಾರದೋತ್ಸವದ ಸಭಾಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
    ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸದಾ ಪಾಲ್ಗೊಳ್ಳುವುದರಿಂದ ವಿವಿಧ ವಿಚಾರಗಳು ನಮ್ಮ ತಿಳುವಳಿಕೆಗೆ ಬರುವುದಲ್ಲದೆ ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ಆತ್ಮಸ್ತೈರ್ಯ ಲಭಿಸುತ್ತದೆ. ನಮ್ಮ ಸಂಸ್ಕøತಿಯನ್ನು ನಾವು ಬಿಟ್ಟುಕೊಡಬಾರದು. ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸಮಾಜಬಾಂಧವರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ ಎಂದು ಅವರು ಸಮಿತಿಯ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು.
     ಶಾರದೋತ್ಸವ ಸಮಿತಿಯ ಅಧ್ಯಕ್ಷ ಈಶ್ವರ ಮಾಸ್ತರ್ ಪೆರಡಾಲ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಣ್ಣೂರು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಕೆ.ನಾರಾಯಣ ನಾಯ್ಕ ಮಾತನಾಡಿ ಮರಾಟಿ ಚರಿತ್ರೆಯಲ್ಲಿ ಇಂತಹ ಒಂದು ಸಂಘಟನೆ ಇಲ್ಲ. ನವರಾತ್ರಿಯು ಮರಾಟಿ ಸಮಾಜ ಬಾಂಧವರಿಗೆ ವಿಶೇಷ ಆಚರಣೆಯಾಗಿದೆ. ಶಾರದೋತ್ಸವವು ಮರಾಟಿಗರ ಅತಿದೊಡ್ಡ ಜಾತ್ರೆಯಾಗಿದೆ. ಸತ್ಯ ಧರ್ಮ ನ್ಯಾಯಕ್ಕೆ ವಿರುದ್ಧವಾಗಿ ನಡೆಯಬಾರದು. ಮೀಸಲಾತಿ ಇದ್ದರೂ ಎಲ್ಲರೊಂದಿಗೂ ಸ್ಪರ್ಧಿಸಿ ಮೊದಲಿಗರಾಗಲು ನಾವು ಪ್ರಯತ್ನಿಸಬೇಕು ಎಂದರು.
         ಶೂನ್ಯ ಬಂಡವಾಳ ಕೃಷಿಯ ಮೂಲಕ ಗಮನಸೆಳೆದ ನಾರಾಯಣ ನಾಯ್ಕ ಪಾಡ್ಲಡ್ಕ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವ ಯಕ್ಷಗಾನ ಭಾಗವತ ಜಯರಾಮ ನಾಯ್ಕ ಆಡೂರು, ಶಿಶಿರ ಎಸ್.ವಿ., ಲತಾಶ್ರೀ ಚಕ್ರೇಶ್ವರ, ಸುಕನ್ಯಾ ಇವರನ್ನು ಅಭಿನಂದಿಸಲಾಯಿತು. ಕೇರಳ ಮರಾಟಿ ಎಂಪ್ಲೋಯೀಸ್ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ ವೈ., ಪೆರ್ಲ ಶ್ರೀ ಶಾರದಾ ಮರಾಟಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀ ಟೀಚರ್, ಮಂಗಳೂರು ಕೋರ್ಪರೇಶನ್ ಬೇಂಕ್‍ನ ಸಹ ಪ್ರಬಂಧಕ ದೀಪ್ತಿ ಪಿ. ಶುಭಾಶಂಸನೆಗೈದರು. ನಿವೃತ್ತ ಟ್ರಾಫಿಕ್ ಎಸ್.ಐ. ನಾಗೇಶ್ ಅವರು ಧ್ವಜಾರೋಹಣಗೈದು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾರದೋತ್ಸವದ ರಕ್ಷಾಧಿಕಾರಿ ಗಳಾದ ಸುಬ್ರಹ್ಮಣ್ಯ ಕನಕಪ್ಪಾಡಿ ಪ್ರಾಸ್ತಾವಿಕ ನುಡಿ, ರಾಜಗೋಪಾಲ ಎ.ಕೆ. ನಿರೂಪಣೆಗೈದರು. ಸಮಿತಿಯ ರಕ್ಷಾಧಿಕಾರಿ ಸುಂದರ ನಾಯ್ಕ ಕನಕಪ್ಪಾಡಿ ಸ್ವಾಗತಿಸಿ, ರಮೇಶ್ ಬೈಕುಂಜ ವಂದಿಸಿದರು.
    ಪ್ರಾತಃಕಾಲ ವೇದಮೂರ್ತಿ ಪಟ್ಟಾಜೆ ವೆಂಕಟೇಶ್ವರ ಭಟ್ ಅವರಿಂದ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆ, ಬೆಳಗಿನ ಪೂಜೆ, ಪ್ರಾರ್ಥನೆ, ಮಹಾಗಣಪತಿ ಹವನ, ಆಯುಧಪೂಜೆ, ವಾಹನಪೂಜೆ ಜರಗಿತು. ಮಧ್ಯಾಹ್ನ ಮಹಾಪೂಜೆ ಜರಗಿತು. ಅಪರಾಹ್ನ ಜಯರಾಮ ಪಾಟಾಳಿ ಪಡುಮಲೆ ನಿರ್ದೇಶನದಲ್ಲಿ ಬದಿಯಡ್ಕ ಶಾರದಾಂಬ ಯಕ್ಷಗಾನ ಕಲಾಸಂಘದ ವತಿಯಿಂದ `ಬಪ್ಪನಾಡು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries