ಪೆರ್ಲ:ಪೆರ್ಲ ಶ್ರೀಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ ಶಾಲಾ ಮಟ್ಟದ ಕಲೋತ್ಸವ ಶುಕ್ರವಾರ ಹಾಗೂ ಶನಿವಾರ ನಡೆಯಿತು.
ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ವೆಂಕಟ್ರಾಜ ಮಿತ್ರ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕ ಬಿ.ರಾಜೇಂದ್ರ ಅಧ್ಯಕ್ಷತೆ ವಹಿಸಿದರು.ಮಂಡಳಿ ಉಪಾಧ್ಯಕ್ಷ ಸದಾಶಿವ ಭಟ್, ಮಾತೃ ಮಂಡಳಿ ಅಧ್ಯಕ್ಷೆ ಅಕ್ಕಮ್ಮ ಶುಭ ಹಾರೈಸಿದರು. ಅಧ್ಯಾಪಕ ಎ. ಉದಯಶಂಕರ ಕಾರ್ಯಕ್ರಮದ ಕುರಿತು ವಿವರಣೆ ನೀಡಿದರು. ಹಿರಿಯ ಶಿಕ್ಷಕ ಯನ್.ಕೇಶವ ಪ್ರಕಾಶ ಸ್ವಾಗತಿಸಿ, ರಾದಾಕೃಷ್ಣ ಭಟ್ ವಂದಿಸಿದರು. ಉಮೇಶ ಕೆ. ನಿರೂಪಿಸಿದರು.
ಗಾಯನ, ಸಮೂಹ ಗಾಯನ, ಸಮೂಹ ನೃತ್ಯ, ಭರತನಾಟ್ಯ ಮೊದಲಾದ ಸ್ಪರ್ಧೆಗಳು ನಡೆದವು. ರಕ್ಷಕರು, ಊರವರು, ಅಧ್ಯಾಪಕ ಸಿಬ್ಬಂದಿಗಳು ಉಪಸ್ಥಿತರಿದ್ದರು.





