ಕಾಸರಗೋಡು: ಅಖಿಲ ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘ ಕಾಸರಗೋಡು ಜಿಲ್ಲಾ ಸಮಿತಿಯ ಸಭೆಯು ಕರಂದಕ್ಕಾಡ್‍ನಲ್ಲಿರುವ ಸಂಘದ ಕಚೇರಿಯಲ್ಲಿ ಜರಗಿತು.
ಜಿಲ್ಲಾಧ್ಯಕ್ಷ ಎಂ.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಎ.ಕೆ.ರವೀಂದ್ರನ್ ಅವರು ಡಿ.28 ಮತ್ತು 29 ರಂದು ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ಅಖಿಲ ಭಾರತ ರಾಜ್ಯ ಪೆನ್ಶನರ್ಸ್ ಮಹಾಸಂಘದ ಪ್ರತಿನಿ„ಗಳ ಸಮಾವೇಶ ನಡೆಯಲಿರುವ ಬಗ್ಗೆ ವಿವರಿಸಿದರು. ಈ ಬಗ್ಗೆ ಕೇರಳದಿಂದ 25 ಮಂದಿ ಪ್ರತಿನಿ„ಗಳನ್ನು ಕಳುಹಿಸುವ ಬಗ್ಗೆ ತೀರ್ಮಾನಿಸಲಾಯಿತು.
ಅಖಿಲ ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘದ ಅಧ್ಯಕ್ಷ ಸಿ.ಎಚ್.ಸುರೇಶ್ ಸಮಾವೇಶದ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಹಿಮಾಚಲ ಪ್ರದೇಶದಿಂದಲೇ 1000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸಿ.ಎಚ್.ಸುರೇಶ್, ಕುಂಞÂಕಣ್ಣನ್, ಎಂ.ಜನಾರ್ಧನ, ಎಂ.ಗೋಪಾಲ, ಎಂ.ಬಾಲಕೃಷ್ಣ, ಸಿ.ಎಚ್.ಹರೀಂದ್ರನ್, ಒ.ರಾಜೇಂದ್ರ, ಜನಾರ್ಧನ ಎನ್. ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಎ.ಕೆ.ರವೀಂದ್ರನ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿಶ್ವನಾಥ ರಾವ್ ವಂದಿಸಿದರು.




