ಕಾಸರಗೋಡು: 2019 ರಲ್ಲಿ ಉಂಟಾದ ನೆರೆ ಬಾ„ತರ ಸಾಲಕ್ಕಿರುವ ಮೊರಟೋರಿಯಂ ಸೌಲಭ್ಯಕ್ಕೆ ಸಂಬಂಧಿಸಿ ಬ್ಯಾಂಕ್‍ಗಳಿಗೆ ಅರ್ಜಿ ಸಲ್ಲಿಸಬಹುದು.
ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ತೀರ್ಮಾನದಂತೆ ಹಾಗು ಅ.23 ರ ಸರಕಾರದ ಆದೇಶದಂತೆ ನೆರೆ ಪೀಡಿತ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವವರು ಅರ್ಜಿ ಸಲ್ಲಿಸಲು ಅರ್ಹರು. ಆಯಾಯ ಬ್ಯಾಂಕ್‍ಗಳಲ್ಲಿ ಅರ್ಜಿ ಸಲ್ಲಿಸುವವರಿಗೆ ಮಾತ್ರವೇ ಬ್ಯಾಂಕ್‍ಗಳು ಸಾಲ ಮೊರಟೋರಿಯಂ ಮಂಜೂರು ಮಾಡುವುದಾಗಿ ಲೀಡ್ ಜಿಲ್ಲಾ ಪ್ರಬಂಧಕರು ತಿಳಿಸಿದ್ದಾರೆ.
2019 ಜುಲೈ 31 ರಿಂದ ನೆರೆಯ ಕಾರಣದಿಂದ ಸಾಲ ಮರುಪಾವತಿ ಮೊಟಕುಗೊಂಡ ಕೃಷಿಕರು, ವ್ಯಾಪಾರಿಗಳು, ಭವನ, ಶಿಕ್ಷಣ ಸಾಲ ಪಡೆದವರಿಗೆ ನವಂಬರ್ 25 ರ ವರೆಗೆ ಬ್ಯಾಂಕ್ ಶಾಖೆಗಳಲ್ಲಿ ಮೊರಟೋರಿಯಂಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರವನ್ನು 04994-230170 ನಂಬ್ರದಲ್ಲಿ ಪಡೆಯಬಹುದು.




