ಕಾಸರಗೋಡು: ಮನೆ ಅನ್ನೋದು ಭಾಷೆಯ ಗುಡಿ. ಅಲ್ಲಿ ಪೂಜಿಸಲ್ಪಡಬೇಕಾದದ್ದು ಭಾಷೆ ಮತ್ತು ಸಂಸ್ಕøತಿ. ಗುಡಿಯೊಳಗೆ ಇವೆರಡೂ ಇಲ್ಲದೆ ಹೋದರೆ ಅದು ಕೇವಲ ಮಣ್ಣಿನ ಗೂಡಾಗುತ್ತದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರೂ, ಖ್ಯಾತ ರಂಗಕರ್ಮಿಗಳೂ ಆದ ಕಾಸರಗೋಡು ಚಿನ್ನಾ ಹೇಳಿದರು.
ಅವರು ಖ್ಯಾತ ರಂಗನಟ, ವಿಠೋಬ ಭಂಡಾರ್ಕರ್ ಅವರ ಹೇಟ್‍ಹಿಲ್‍ನಲ್ಲಿರುವ ನಿವಾಸದಲ್ಲಿ 142 ನೇ `ಘರ್ ಘರ್ ಕೊಂಕಣಿ'ಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಭಾಷೆ ಅನ್ನೋದು ಪ್ರತಿಯೊಬ್ಬರಿಗೂ ಸಂಸ್ಕøತಿ ಕಲಿಸುತ್ತದೆ. `ಸಂಸ್ಕøತಿ ಕಲಿತಾಗ' ಸಂಸ್ಕಾರ ಬೆಳೆಯುತ್ತದೆ. ಅದುವೇ ನಮಗೆ ಉತ್ತಮ ಜೀವನವನ್ನು ಕಲಿಸುತ್ತದೆ. ಮುಂದಿನ ಜನಾಂಗಕ್ಕೆ ಇದನ್ನು ಮನವರಿಕೆ ಮಾಡಿಕೊಡಬೇಕಾದ ಅನಿವಾರ್ಯತೆ ಇದೆ ಎಂದರು. ಗುರು ಹಿರಿಯರಿಗೆ ಗೌರವ ಕೊಡುವ ಸಂಸ್ಕಾರವೂ ಕಡಿಮೆ ಆದರ್ಶಪ್ರಾಯರಾಗಿ ಬದುಕಿ ಅವರಿಗೆ ದಾರಿ ದೀಪವಾಗಬೇಕು. ಕೊಂಕಣಿ ಭಾಷೆಗೆ ಸಂಸ್ಕಾರವನ್ನು ಕಲಿಸುವ ಗುಣವಿದೆ. ಅದನ್ನು ಕಲಿಸಿ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕೊಡಿಯಾಲ್ ಖಬರ್ ಪತ್ರಿಕೆಯ ಸಂಪಾದಕ ಮಾವಿನಕುರ್ವೆ ವೆಂಕಟೇಶ ಬಾಳಿಗಾ ಅವರು ಕೊಂಕಣಿ ಭಾಷೆಯನ್ನು ಕಲಿಯಲು ಯುವಕರು ಮುಂದೆ ಬರಬೇಕೆಂದರು. ಮನೆಗಳಲ್ಲಿ ಇಂಥಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಮುಖಾಂತರ ಭಾಷೆಯ ಬಗ್ಗೆ ಅಭಿಮಾನ ಹುಟ್ಟುವುದಲ್ಲದೆ, ಸಾಹಿತ್ಯ ಕಲಿಯಲು ಪ್ರೇರಣೆಯೂ ಆಗಬಲ್ಲದು. ಈ ನಿಟ್ಟಿನಲ್ಲಿ ಕಾಸರಗೋಡು ಚಿನ್ನಾ ಅವರ ನಿರಂತರ ಕೊಂಕಣಿ ಅಭಿಯಾನ ಶ್ಲಾಘನೀಯ ಎಂದರು.
ಖ್ಯಾತ ರಂಗಕರ್ಮಿಗಳಾದ ಮುರಳೀಧರ ಕಾಮತ್, ಪ್ರಕಾಶ್ ನಾಯಕ್, ಉದ್ಯಮಿ ನರಸಿಂಹ ಭಂಡಾರ್ಕರ್ ಅವರು ಕೊಂಕಣಿ ಭಾವಗೀತೆಗಳನ್ನು ಹಾಡಿದರು. ವೆಂಕಟೇಶ ಬಾಳಿಗಾ ಅವರು ಕೊಂಕಣಿ ಪ್ರಶ್ನೋತ್ತರ ಹಾಗು ವರ್ಷಾ ಎಸ್.ಕಾಮತ್ ಅವರಿಂದ ಕೊಂಕಣಿ ಆಟಗಳು ನಡೆಯಿತು.
ವೇದ್ಯಾ ಸಂತೋಷ್ ಕಾಮತ್ ಪ್ರಾರ್ಥನೆ ಹಾಡಿದರು. ಮನೆ ಯಜಮಾನ, ಚಲನಚಿತ್ರ ನಟ ಭಂಡಾರ್ಕರ್ ಅವರು ಸ್ವಾಗತಿಸಿದರು. ವಿಶಾಲ ಭಂಡಾರ್ಕರ್ ವಂದಿಸಿದರು.





