HEALTH TIPS

ನಾಡಿನ ಅಭಿವೃದ್ಧಿ ಐಕ್ಯರಂಗದಿಂದ ಮಾತ್ರ ಸಾಧ್ಯ-ಉಮ್ಮನ್ ಚಾಂಡಿ


       
       ಮಂಜೇಶ್ವರ: ರಾಜ್ಯ ಹಾಗೂ ಕೇಂದ್ರ ಸರಕಾರದ ಜನದ್ರೋಹ ನೀತಿಯಿಂದಾಗಿ ಜನತೆ ತತ್ತರಿಸಿ ಹೋಗಿದ್ದಾರೆ, ಮಂಜೇಶ್ವರದಲ್ಲಿ ಐಕ್ಯರಂಗವನ್ನು ಗೆಲ್ಲಿಸುವ ಮೂಲಕ ಉಭಯ ಸರಕಾರಗಳಿಗೆ  ತಾಕೀತು ನೀಡಬೇಕು ಎಂದು ಮಾಜೀ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕರೆ ನೀಡಿದ್ದಾರೆ.
    ಅವರು ಮೀಂಜ ಪಂಚಾಯತಿನ ಎ.ಕೆ.ಮಹಲ್ ನಲ್ಲಿ ಜರುಗಿದ 60ನೇಬೂತ್ ಯುಡಿಎಫ್ ಕುಟುಂಬ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.
     ಮಂಜೇಶ್ವರದ ಸಮಗ್ರ ಅಭಿವೃದ್ಧಿ ಮಾಡಿ ಕೀರ್ತಿಶೇಷರಾದ ಚೆರ್ಕಳಂ ಅಬ್ದುಲ್ಲ, ಪಿ.ಬಿ.ಅಬ್ದುಲ್ ರಝಾಕ್ ಪ್ರಾತ:ಸ್ಮರಣೀಯರು. ಮಂಜೇಶ್ವರದ ಅಭಿವೃದ್ಧಿ ಮುಂದುವರಿಕೆಗಾಗಿ ಎಂ.ಸಿ.ಕಮರುಧ್ಧೀನ್ ಇಲ್ಲಿ ಗೆಲ್ಲಬೇಕು, ನಾಡಿನ ಅಭಿವೃದ್ಧಿ ಐಕ್ಯರಂಗದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.
      ಕಾರ್ಯಕ್ರಮದಲ್ಲಿ ಬೂತ್ ಸಮಿತಿ ಅಧ್ಯಕ್ಷ ದಾಮೋದರ ಮಾಸ್ತರ್ ಕಬ್ಬಿನಹಿತ್ಲು ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಕುಂ??ಲಿಕುಟ್ಟಿ, ರಾಜ್ಯ ಕಾರ್ಯದರ್ಶಿ ಕೆಪಿಎ ಮಜೀದ್, ಯುಡಿಎಫ್ ರಾಜ್ಯ ಸಂಚಾಲಕ ಬೆನ್ನಿ ಬೆಹನಾನ್, ಮಾಜೀ ಸಚಿವರುಗಳಾದ ಶಾಸಕ ಯು.ಟಿ.ಖಾದರ್, ವಿನಯಕುಮಾರ್ ಸೊರಕೆ,ಶಾಸಕರುಗಳಾದ ಪಾರಕ್ಕಲ್ ಅಬ್ದುಲ್ಲ,  ಐವನ್ ಡಿ.ಸೋಜ, ಹರೀಶ್ ಕುಮಾರ್,   ಮೊಯಿದಿನ್ ಬಾವಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಶಾಂತಮ್ಮ ಪಿಲಿಪ್, ಶಾಲೆಟ್ ಪಿಂಟೋ, ಕೆಪಿಸಿಸಿ ಕಾರ್ಯದರ್ಶಿಗಳಾದ ಕೆ.ಕೆ.ಅಬ್ರಾಹಂ,  ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ,  ಜೇಮ್ಸ್, ಅಡ್ವಕೇಟ್ ಗೋವಿಂದನ್ ನಾಯರ್, ಬಾಲಕೃಷ್ಣ ಪೆರಿಯ, ಮೀಂಜ ಪಂಚಾಯತು ಅಧ್ಯಕ್ಷೆ ಶಂಷಾದ್ ಶುಕೂರ್, ಬಿ.ಮೊಹಮ್ಮದ್ ಕುಂ ಞÂ್ಞ, ಮಮತಾ ದಿವಾಕರ್, ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries