HEALTH TIPS

ಮಂಜೇಶ್ವರ ಉಪ ಚುನಾವಣೆ- ಮತಗಟ್ಟೆಗಳಲ್ಲಿ ಬದಲಾವಣೆ

           
    ಕಾಸರಗೋಡು: ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಎರಡು ಮತಗಟ್ಟೆ(ಪೋಲಿಂಗ್ ಬೂತ್)ಗಳಲ್ಲಿ ಬದಲಾವಣೆ ನಡೆಸಲಾಗಿದೆ. 147ನೇ ನಂಬ್ರ ಮತಗಟ್ಟೆಯಾಗಿರುವ ಕೊಡಿಯಮ್ಮೆ ಸರಕಾರೊ ಹಿರಿಯ ಪ್ರಾಥಮಿಕ ಶಾಲೆಯ ಆರ್.ಸಿ.ಸಿ. ಕಟ್ಟಡದಲ್ಲಿದ್ದ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಕೊಡಿಯಮ್ಮೆ ಸರಕಾರಿ ಪ್ರೌಢಶಾಲೆಯ ಪೂರ್ವ ಭಾಗದ ಕಟ್ಟಡದಲ್ಲಿ ಮತದಾನ ನಡೆಸಬೇಕು. 148ನೇ ನಂಬ್ರ ಮತಗಟ್ಟೆಯಾಗಿದ್ದ ಕೊಡಿಯಮ್ಮೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಶ್ಚಿಮ ಭಾಗದ ಕಟ್ಟಡದಲ್ಲಿ ಮತದಾನ ನಡೆಸುತ್ತಿದ್ದ ಮತದಾತರು ಈ ಬಾರಿ ಕೊಡಿಯಮ್ಮೆ ಪ್ರೌಡಶಾಲೆಯ ತೆಂಕುಭಾಗದ ಕಟ್ಟಡದಲ್ಲಿ ಮತದಾನ ನಡೆಸಬೇಕು. ಈ ಬಾರಿಯ ಬಿರುಸಿನ ಮಳೆಗೆ ಕೊಡಿಯಮ್ಮೆ ಸೇರತುವೆ ಹಾನಿಗೊಂಡಿರುವ ಹಿನ್ನೆಲೆಯಲ್ಲಿ ಮತಗಟ್ಟೆಗಳಿಗೆ ತಲಪುವುದು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ನಡೆಸಲಾಗಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಈ ಬದಲಾವಣೆಗೆ ಚುನಾವಣೆ ಆಯೋಗ ಮಂಜೂರಾತಿ ನೀಡಿದೆ. ಆದರೆ 149ನೇ ಬೂತ್ ಕೊಡಿಯಮ್ಮೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಭಾಗದ ಕಟ್ಟಡದಲ್ಲಿ ಮತದಾನನಡೆಸುವವರು ಅಲ್ಲೇ ಈ ಬಾರಿಯೂ ಮತದಾನ ನಡೆಸಬೇಕು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries