ಕಾಸರಗೋಡು: ತಾಳಿಪಡ್ಪಿನ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ, ವೃಂದ ಪಿ. ಮತ್ತು ಕೆ.ಮನೋಹರ ನಾಯಕ್ ಮೈಸೂರು, ಹಾಗು ಶ್ರೀ ಭಾರತಿ ನೇತ್ರ ಚಿಕಿತ್ಸಾಲಯ ಮುಜುಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.20 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ರ ವರೆಗೆ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನದಲ್ಲಿ ಉಚಿತ ನೇತ್ರ ತಪಾಸಣೆ ಹಾಗು ಚಿಕಿತ್ಸಾ ಶಿಬಿರ ನಡೆಯಲಿದೆ.
ಅಭಿಯನಿಕೇತನದ ಅಧ್ಯಕ್ಷ ಡಾ|ಎಸ್.ಬಿ.ಖಂಡಿಗೆ ಉದ್ಘಾಟಿಸುವರು. ಡಾ|ಪ್ರಶಾಂತ್ ಕುಮಾರ್ ಆಚಾರ್, ಡಾ|ಆನಂದ ಹಂಡಿ, ಡಾ|ಸುಮತಿ ನಾಯಕ್ ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಕನ್ನಡಕ ಮತ್ತು ಔಷ„ಗಳನ್ನು ವಿತರಿಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಲು ವಿನಂತಿಸಲಾಗಿದೆ.

