ಕಾಸರಗೋಡು: ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ಅ.19 ರಂದು ನವಾನ್ನ ಸಮರ್ಪಣೆ ಕಾರ್ಯಕ್ರಮ ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ 8 ಕ್ಕೆ ಉಷ:ಪೂಜೆ, 8.15 ರಿಂದ ಗಣಪತಿ ಹೋಮ, 9 ರಿಂದ ದೇವಸ್ಥಾನ ತುಂಬಿಸುವುದು, ಭಕ್ತ ಮಹನೀಯರಿಗೆ ತೆನೆ ವಿತರಣೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1 ರಿಂದ ನವಾನ್ನ ಸಂತರ್ಪಣೆ(ಸಾಮೂಹಿಕ ಭೋಜನ) ನಡೆಯಲಿದೆ.

