ಕಾಸರಗೋಡು ಸಾಂಸ್ಕøತಿಕ ನಾಯಕರ ವಿರುದ್ಧ ನಡೆಯುತ್ತಿರುವ ಅಕ್ರಮಗಳನ್ನು ನಿಲ್ಲಿಸಬೇಕೆಂದು ಪುರೋಗಮನ ಕಲಾ ಸಾಹಿತ್ಯ ಕಲಾ ಸಂಘ ಕಾಸರಗೋಡು ಏರಿಯಾ ಸಮಿತಿ ಸಮ್ಮೇಳನವನ್ನು ಉದ್ಘಾಟಿಸಿ ಜಿಲ್ಲಾಧ್ಯಕ್ಷ ಸಿ.ಎಂ.ವಿನಯಚಂದ್ರನ್ ಹೇಳಿದರು.
ಪಾರೆಕಟ್ಟೆಯ ಎ.ಕೆ.ಜಿ. ಗ್ರಂಥಾಲಯದಲ್ಲಿ ನಡೆದ ಏರಿಯಾ ಸಮ್ಮೇಳನದ ಅಧ್ಯಕ್ಷತೆಯನ್ನು ನ್ಯಾಯವಾದಿ ಪಿ.ವಿ.ಜಯರಾಜನ್ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಸಂಗೀತಗಾರರಾದ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ, ಸಾಹಿತಿ-ಕವಿ ಎಂ.ನಿರ್ಮಲ ಕುಮಾರ್, ನಾರಾಯಣನ್ ಪೆರಿಯಾ, ಕಲಾವಿದೆ ಭಾರತಿ ಬಾಬು, ಕಲಾವಿದ ಕೆ.ಎಚ್.ಮೊಹಮ್ಮದ್ ಮುಂತಾದವರನ್ನು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲಿಯಾನ್ ಗೌರವಿಸಿದರು.
ಬಾಲಕೃಷ್ಣ ಚೆರ್ಕಳ, ಡಾ.ಪೂಮಣಿ ಪುದಿಯರಕ್ಕಲ್, ಪಿ.ದಾಮೋದರನ್ ಮುಂತಾದವರು ಮಾತನಾಡಿದರು. ಸಾಹಿತ್ಯ ಸಂಘದ ಕಾಸರಗೋಡು ಪ್ರದೇಶದ ನೂತನ ಪದಾಧಿಕಾರಿಗಳಾಗಿ ಬಾಲಕೃಷ್ಣ ಚೆರ್ಕಳ(ಅಧ್ಯಕ್ಷ), ಬಿ.ಕೆ.ಸುಕುಮಾರನ್(ಕಾರ್ಯದರ್ಶಿ) ಅವರನ್ನು ಆರಿಸಲಾಯಿತು.


