ಕಾಸರಗೋಡು: ಕಾಸರಗೋಡು ವಲಯ ಬಂಟರ ಸಂಘದ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಪ್ಲಸ್ ವನ್, ಪ್ಲಸ್ ಟು, ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವವರಾಗಿರಬೇಕು. ಕಳೆದ ಸಾಲಿನ ಜಿಲ್ಲಾ ಸಂಘದ ವತಿಯಿಂದ ವಿದ್ಯಾಭ್ಯಾಸ ವೇತನವನ್ನು ಪಡೆದವರು ಈ ವಿದ್ಯಾಭ್ಯಾಸ ವೇತನಕ್ಕೆ ಆರ್ಹರಲ್ಲ. ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿ ಮತ್ತು ವ್ಯಾಸಂಗ ಮಾಡುತ್ತಿರುವ ಶಾಲಾ ದೃಢ ಪತ್ರದೊಂದಿಗೆ ಆಯಾ ಪಂಚಾಯತ್ ಸಮಿತಿಯ ಅಧ್ಯಕ್ಷ ಯಾ ಕಾರ್ಯದರ್ಶಿಯವರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ನವೆಂಬರ್ ೧೫ ಆಗಿದೆ. ಹೆಚ್ಚಿನ ವಿವರಗಳಿಗೆ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ -೯೪೯೫೧೮೦೨೪೭, ಕಾರ್ಯದರ್ಶಿ ರವೀಂದ್ರ ರೈ ಮಲ್ಲಾವರ - ೯೪೪೭೩೭೪೯೯೫ ಅವರನ್ನು ಸಂಪರ್ಕಿಸಬಹುದು.




