HEALTH TIPS

ಮಕ್ಕಳು ಸ್ಪೂರ್ತಿಗೊಳಗಾಗಿ ಕಾರ್ಯಕ್ರಮ ಕೊಡುವುದೇ ಪ್ರತಿಭೆ-ಶಾಮ ಭಟ್ ದರ್ಭೆಮಾರ್ಗ

      ಕುಂಬಳೆ: ಮುಜುಂಣಗಾವಿನ ಶ್ರೀಭಾರತೀವಿದ್ಯಾಪೀಠದಲ್ಲಿ ಇತ್ತೀಚೆಗೆ ತಿಂಗಳ ಪ್ರತಿಭಾ ಭಾರತಿ ಕರ‍್ಯಕ್ರಮ ಜರುಗಿತು. ಎಲ್ಲ ತರಗತಿಗಳಿಂದ ನಿಯೋಜಿತ ಕಾರ್ಯಕ್ರಮಗಳು ಮುಗಿದ ಬಳಿಕ ಪೂರ್ವನಿಯೋಜಿತವಲ್ಲದೆ ಸ್ವತಃ ಕಾರ್ಯಕ್ರಮಕೊಡುವವರಿಗೆ ಅವಕಾಶ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಹಲವಾರು ಮಕ್ಕಳು ದೇಶಭಕ್ತಿಗೀತೆ, ದೀಪಾವಳಿಗೆ ಸಂಬAಧಪಟ್ಟAತೆ ಭಾಷಣ, ಕತೆ ಮೊದಲಾದುವುಗಳನ್ನು ಪ್ರಸ್ತುತ ಪಡಿಸಿದರು.
    ಈ ಸಂದರ್ಭ ಮಾತನಾಡಿದ ವಿದ್ಯಾಪೀಠದ  ಆಡಳಿತಾಧಿಕಾರಿ ಶ್ಯಾಂ ಭಟ್ ದರ್ಭೆಮಾರ್ಗ ಅವರು, ಸ್ವ ಇಚ್ಛೆಯಿಂದ ತಕ್ಷಣವೇ ಯೋಚಿಸಿ ವೇದಿಕೆಯಲ್ಲಿ ಕಾರ್ಯಕ್ರಮ ಕೊಡುವುದೇ ನಿಜವಾದ ಪ್ರತಿಭೆ. ನಾವು ಮೈಗೂಡಿಸಿಕೊಂಡಿರುವ ಹವ್ಯಾಸ, ಸತತ ಪರಿಶ್ರಮಗಳಿಂದ ಪ್ರತಿಭೆಗಳ ಪೂರಕ ಬೆಳವಣಿಗೆಗೆ ಸಾಧ್ಯವಾಗದ ಅನೇಕ ಪ್ರತಿಭಾಶಾಲಿಗಳು ನಮ್ಮಿದಿರು ಇರುತ್ತಾರೆ. ಅಂತವರನ್ನು ಕೈನೀಡಿ ಪ್ರೋತ್ಸಾಹಿಸುವ, ಬೆಂಬಲ ನೀಡುವ ಹೃದಯ ಶ್ರೀಮಂತಿಕೆ ನಮ್ಮಲ್ಲಿರಬೇಕು ಎಮದು ತಿಳಿಸಿದರು.
      ವೇದಿಕೆಯಲ್ಲಿದ್ದ ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ ಅವರು ಸ್ವ ಇಚ್ಛೆಯಿಂದ ಕರ‍್ಯಕ್ರಮ ನೀಡಿದ ಮಕ್ಕಳನ್ನು ಶ್ಲಾಘಿಸಿದರು.
  ಕಾರ್ಯಕ್ರಮದ ಅಧ್ಯಕ್ಷೆಯನ್ನು ಹತ್ತನೇ ತರಗತಿ ವಿದ್ಯಾರ್ಥಿನಿ ಮಧುರಾ ವಹಿಸಿದ್ದಳು. ೯ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು.ಹತ್ತನೇ ತರಗತಿಯ ವೈಶಾಲಿ ಸ್ವಾಗತಿಸಿ, ೧೦ನೇ ತರಗತಿ ನಿಖಿಲಾ ಹಾಗೂ ಆತ್ಮಿಕಾ ನಿರೂಪಿಸಿದರು. ೧೦ನೇತರಗತಿ ಶಿವಾನಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries