ಕಾಸರಗೋಡು: ಮಾತೃ ಭಾಷೆಯೇ ಪೂರ್ಣರೂಪದಲ್ಲಿ ಆಡಳಿತೆ ಭಾಷೆಯಾಗುವ ದಿನಗಳು ದೂರವಿಲ್ಲ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು.
ಆಡಳಿತೆ ಭಾಷಾ ಸಪ್ತಾಹವನ್ನು ಕಾಂಞAಗಾಡ್ ಕಿರು ಸಿವಿಲ್ ಸ್ಟೇಷನ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಪ್ರಜೆಗಳಿಗೆ ತಮ್ಮ ಮಾತೃ ಭಾಷೆಯಲ್ಲೇ ಮಾಹಿತಿಗಳು ಲಭಿಸಿದಲ್ಲಿ ಅವರ ಉತ್ಸಾಹ ಇಮ್ಮಡಿಯಾಗುತ್ತದೆ. ನಾಡಿನ ನಾಡಿಮಿಡಿತ ಬಲ್ಲವರೇ ಅಧಿಕಾರಕ್ಕೇರುವುದು ಅನಿವಾರ್ಯ ಎಂದರು.
ಕಾಂಞAಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಭಾಷಾ ಪ್ರತಿಜ್ಞೆ ಸ್ವೀಕಾರಕ್ಕೆ ನೇತೃತ್ವ ವಹಿಸದ್ದರು. ರಾಜ್ಯ ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ನ್ಯಾಯವಾದಿ ಪಿ.ಅಪ್ಪುಕುಟ್ಟನ್ ಪ್ರದಾನ ಭಾಷಣ ಮಾಡಿದರು. ವಿವಿಧ ಸ್ಪರ್ಧಾ ವಿಜೇತರಿಗೆ ಉಪ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಬಹುಮಾನ ವಿತರಿಸಿದರು. ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿ ಮಧುಸೂದನನ್ ಎಂ. ಸ್ವಾಗತಿಸಿ, ತಹಸೀಲ್ದಾರ್ ಎನ್.ಮಣಿರಾಜ್ ವಂದಿಸಿದರು. ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.




