ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಮುಂದೆ ಪ್ಲಾಸ್ಟಿಕ್ ಮಿಶ್ರಿತ ರಸ್ತೆಗಳನ್ನು ವಹಿಸಿಕೊಳ್ಳಲು ನಿರ್ಧರಿಸಲಾಗಿದೆ. ರಸ್ತೆ ನಿರ್ಮಾಣ ಬಳಕೆಯಲ್ಲಿಲ್ಲದ ಪ್ಲಾಸ್ಟಿಕ್ ಬಳಸಲು ತೀರ್ಮಾನಿಸಲಾಗಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಸಭೆಯಲ್ಲಿ ಈ ಸಂಬAಧ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜಮೋಹನ್ ಪ್ಲಾಸ್ಟಿಕ್ ಬಳಸಿ ನಿರ್ಮಿಸುವ ರಸ್ತೆಯ ಮಾಹಿತಿ ನೀಡಿದರು. ಲೋಕೋಪಯೋಗಿ ಕಟ್ಟಡ ವಿಭಾಗ ಅಭಿಯಂತರ ಸಿ.ರಾಜೇಶ್ ಚಂದ್ರನ್, ಹಣಕಾಸುಶ್ಧಿಕಾರಿ ಕೆ.ಸತೀಶನ್, ನೀರಾವರಿ ವಿಭಾಗ ಅಭಿಯಂತರ ಎಸ್.ಕೆ.ರಮೇಶನ್, ಐ.ಕೆ.ಮೋಹನ್, ಜಲ ಪ್ರಾಧಿಕಾರ ಅಭಿಯಂತರ ಕೆ.ಸುದೀಪ್, ಸಹಾಯಕ ಎಂಜಿನಿಯರ್ ಪಿ.ಆರ್.ಉಷಾ, ಹಾರ್ಬರ್ ಎಂಜಿನಿಯರಿAಗ್ ವಿಭಾಗ ಅಭಿಯಂತರ ಎಂ.ಟಿ.ರಾಜೀವ್ ಉಪಸ್ಥಿತರಿದ್ದರು.





