ಕಾಸರಗೋಡು: ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ ಪ್ರೌಢಶಾಲಾ ವಿಭಾಗ ಸಂಸ್ಕೃತ ನಾಟಕ ಸ್ಪರ್ಧೆಯಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ `ಉತ್ಕೋಚ ಸಂಹಾರA' ಎಂಬ ನಾಟಕ ಎ ಶ್ರೇಣಿಯೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಲಂಚ ಪ್ರಕರಣ ಮಾನವ ಸಮಾಜದ ಅತಿದೊಡ್ಡದಾದ ಪಿಡುಗು ಎಂಬ ವಿಷಯವನ್ನು ಆಧಾರಿಸಿದ ನಾಟಕ ಇದಾಗಿದೆ. ವಿದ್ಯಾರ್ಥಿಗಳಾದ ವಿಶ್ವಜಿತ್, ವಿವೇಕ್ ರೈ, ಅಕ್ಷಯ ಗಣಪತಿ, ಭೂಮಿಕಾ, ಪೂರ್ಣಿಮಾ, ಶರಣ್ಯ, ಅಂಕಿತ, ಮನೀಶ್ ಎಸ್. ಡಿ., ಶ್ರೇಯ, ನಮೃತಾ ಪಾತ್ರಗಳಿಗೆ ಜೀವತುಂಬಿದರು.
ಅಧ್ಯಾಪಕರಾದ ಶಿವನಾರಾಯಣ ಭಟ್, ಪ್ರಶಾಂತ ಹೊಳ್ಳ ಎನ್., ಶಿವಪ್ರಸಾದ ಚೆರುಗೋಳಿ, ರಾಜಕುಮಾರ ಕೆ., ಪ್ರದೀಪ್ ಕರ್ವಾಜೆ, ಶ್ವೇತ ಕುಮಾರಿ, ವಿಜಯಲಕ್ಷಿö್ಮÃ ಸಹಕರಿಸಿದರು.





