HEALTH TIPS

ಕಲಾ ಪ್ರಕಾರಗಳ ಸಂರಕ್ಷಣೆ ಹಾಗೂ ಪರಂಪರೆ ಎತ್ತಿ ಹಿಡಿಯುವಲ್ಲಿ ಶಾಲಾ ಕಲೋತ್ಸವಗಳು ಸಹಕಾರಿ-ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಭಿಪ್ರಾಯ


       ಕಾಸರಗೋಡು: ಕೇರಳದ ಚರಿತ್ರೆ, ಪರಂಪರೆಯನ್ನು ಮುಂಚೂಣಿಗೆ ತರುವುದರ ಜತೆಗೆ ಕಲೆಗಳ ಸಂರಕ್ಷಣೆಗೆ ಶಾಲಾ ಕಲೋತ್ಸವಗಳು ಹೆಚ್ಚು ಸಹಕಾರಿಯಾಗಿರುವುದಾಗಿ ಕಾಸರಗೋಡು ಲೋಕಸಭಾ ಕ್ಷೇತ್ರದ ಸದಸ್ಯ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
     ಅವರು ಕೇರಳ ರಾಜ್ಯ 60ನೇ ಶಾಲಾ ಕಲೋತ್ಸವದ ಪೂರ್ವಭಾವಿಯಾಗಿ ಕಾಸರಗೋಡು ಪ್ರೆಸ್‍ಕ್ಲಬ್ ನೇತೃತ್ವದಲ್ಲಿ ಶನಿವಾರ  ಕಾಞಂಗಾಡು ವ್ಯಾಪಾರಿ ಭವನದಲ್ಲಿ ನಡೆದ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
     ಮಕ್ಕಳಲ್ಲಿ ಊಹೆಗೂ ನಿಲುಕದ ಪ್ರತಿಭೆ ಅಡಕವಾಗಿದ್ದು, ಇದು ಸೂಕ್ತ ರೀತಿಯಲ್ಲಿ ಪ್ರಕಟಗೊಳ್ಳಬೇಕಾದರೆ ಹೆತ್ತವರ ಹಾಗೂ ಶಿಕ್ಷಕರ ಸಹಕಾರ ಅಗತ್ಯ. ಶಾಲಾ ಕಲೋತ್ಸವಗಳಿಂದ ಮಕ್ಕಳಲ್ಲಿನ ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುತ್ತಿದೆ. ಶಾಲಾ ಕಲೋತ್ಸವಗಳಲ್ಲಿನ ಸ್ಪರ್ಧೆ ಜೀವನದಲ್ಲಿ ಸೌಹಾರ್ದತೆಗೆ ಹಾದಿಮಾಡಿಕೊಡುವಂತಿರಬೇಕು. ತೀರ್ಪುಗಾರರು ಆಮಿಷಕ್ಕೆ ಒಳಗಾಗದೆ, ಆತ್ಮಾವಲೋಕನದೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸಬೇಕು. ಮಕ್ಕಳ ಪರತಿಭೆ ಮನೆ, ಶಾಲಾ ಕ್ಯಾಂಪಸ್‍ಗೆ ಸೀಮಿತವಾಗಿರದೆ, ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸುವಂತಾಗಬೇಕು ಎಂದು ತಿಳಿಸಿದರು.
ಕಲೋತ್ಸವ ಮೀಡಿಯಾ ಕಮಿಟಿ ಅಧ್ಯಕ್ಷರಾಗಿರುವ ಕಾಸರಗೋಡು ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ನಗರಸಭಾ ಅಧ್ಯಕ್ಷ ವಿ.ವಿ ರಮೇಶನ್, ಎಂ. ರಆಧಾಕೃಷ್ಣನ್, ಕಾಞಂಗಾಡು ಪ್ರೆಸ್‍ಫಾರಂ ಕಾರ್ಯದರ್ಶಿ ನಾರಾಯಣನ್, ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಎಂ. ಮಧುಸೂಧನನ್, ಪ್ರೆಸ್‍ಕ್ಲಬ್ ಕಾರ್ಯದರ್ಶಿ ಕೆ.ವಿ ಪದ್ಮೇಶ್, ಎ.ಸಲೀಂ, ಉಪಸ್ಥಿತರಿದ್ದರು. ಪತ್ರಕರ್ತ ಪಿ.ಎಂ ಮನೋಜ್ ಅವರು 'ಶಾಲಾ ಕಲೋತ್ಸವ ನಿನ್ನೆ-ಇಂದು-ನಾಳೆ'ಎಂಬ ಬಗ್ಗೆ ವಿಷಯ ಮಂಡಿಸಿದರು. ಮೀಡಿಯಾ ಸಮಿತಿ ಅಧ್ಯಕ್ಷ ಎನ್. ಸದಾಶಿವನ್ ಸ್ವಾಗತಿಸಿದರು. ಇವಿ. ಜಯಕೃಷ್ಣನ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries