ಕಾಸರಗೋಡು: ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ಪ್ರಾಯೋಜಕತ್ವದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಮತ್ತು ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗದ ಸಹಯೋಗದಲ್ಲಿ 'ಮಹಾಕವಿ ರತ್ನಾಕರವರ್ಣಿ ಸಾಹಿತ್ಯ - ಸಾಂಸ್ಕøತಿಕ ಆಯಾಮಗಳು' ಎಂಬ ವಿಷಯದ ಬಗ್ಗೆ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣನವೆಂಬರ್ 25ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಸರ್ಕಾರಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆಯಲಿದೆ.
ಹಿರಿಯ ವಿದ್ವಾಂಸ ಡಾ.ರಾಜಪ್ಪ ದಳವಾಯಿ ವಿಚಾರಸಂಕಿರಣ ಉದ್ಘಾಟಿಸುವರು. ಕಾಲೇಜು ಪ್ರಾಂಶುಪಾಲಡಾ. ಎ.ಎಲ್. ಅನಂತಪದ್ಮನಾಭ ಅಧ್ಯಕ್ಷತೆ ವಹಿಸುವರು. ಮಹಾಕವಿ ರತ್ನಾಕರವರರ್ಣಿ ಅಧ್ಯಯನಪೀಠದ ಸಂಯೋಜಕ ಪೆÇ್ರ.ಸೋಮಣ್ಣ, ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಎಸ್ ಉಪಸ್ಥಿತರಿರುವರು.
ಅನಂತರ ವಿವಿಧ ವಿಷಯಗಳಲ್ಲಿ ವಿಚಾರಮಂಡನೆ ನಡೆಯಲಿದೆ. 'ರತ್ನಾಕರವರ್ಣಿಯ ಭರತೇಶ ವೈಭವ ದೇಶೀಯತೆ' ಎಂಬ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮಾಧವ ಎಂ.ಕೆ ಮಾತನಾಡುವರು. 'ಭರತೇಶ ವೈಭವ - ಅಲಕ್ಷಿತ ಓದಿನ ನೆಲೆಗಳು' ಎಂಬ ವಿಷಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದ ಸಂಶೋಧನ ವಿದ್ಯಾರ್ಥಿ ಲಕ್ಷ್ಮೀಕಾಂತ ಮಾತನಾಡುವರು. ಡಾ. ರಾಜೇಶ್ ಬೆಜ್ಜಂಗಳ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2.30ರಿಂದ 'ಭರತೇಶ ವೈಭವದಲ್ಲಿ ಯುದ್ಧ ಮತ್ತು ಶಾಂತಿ' ಎಂಬ ವಿಷಯದಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಉಪನ್ಯಾಸಕ ಡಾ. ಸ್ವಾಮಿ ನ ಕೋಡಿಹಳ್ಳಿ ಮತ್ತು 'ರತ್ನಾಕರವರ್ಣಿಯ ಕೃತಿಯ ಅನನ್ಯತೆಗಳು' ಎಂಬ ವಿಷಯದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ವಿದ್ಯಾಲಕ್ಷ್ಮಿ ಕೆ. ಮಾತನಾಡುವರು. ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್ ಅಧ್ಯಕ್ಷತೆ ವಹಿಸುವರು. ಸಾಯಂಕಾಳ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿದ್ವಾಂಸರಾದ ಮುನಿರಾಜು ರೆಂಜಾಳ ಸಮಾರೋಪ ಭಾಷಣ ಮಾಡುವರು. ಪ್ರೊ. ಸೋಮಣ್ಣ ಅಧ್ಯಕ್ಷತೆ ವಹಿಸುವರು.


