HEALTH TIPS

ಕಾರ್ಮಾರು ಕ್ಷೇತ್ರದ ವಾರ್ಷಿಕೋತ್ಸವ 19 ರಂದು


     ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರಿನ ಶ್ರೀಮಹಾವಿಷ್ಣು ದೇವಸ್ಥಾನದ ವಾರ್ಷಿಕೋತ್ಸವ ಜ.19 ರಂದು ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
     ಭಾನುವಾರ ಬೆಳಿಗ್ಗೆ 8ಕ್ಕೆ ಗಣಪತಿ ಹವನ, 9 ರಿಂದ ನವಕಾಭಿಷೇಕ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ದೀಪಾರಾಧನೆ, ತಾಯಂಬಕ, ರಾತ್ರಿ 9 ರಿಂದ ರಂಗಪೂಜೆ, ಶ್ರೀಭೂತಬಲಿ ಉತ್ಸವ, ಬೆಡಿಸೇವೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ ನಡೆಯಲಿದೆ.
    ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9 ರಿಂದ 11ರ ವರೆಗೆ ಶ್ರೀಅಯ್ಯಪ್ಪ ಸೇವಾ ಸಂಘ ಮಾನ್ಯ, ಶ್ರೀಮಹಾವಿಷ್ಣು ಭಜನಾ ಸಂಘ ಕಾರ್ಮಾರು, ಶ್ರೀಮಹಾವಿಷ್ಣು ಮಹಿಳಾ ವೃಂದ ಕಾರ್ಮಾರು, 11 ರಿಂದ 12.30ರ ವರೆಗೆ ಶ್ರೀಪೂಮಾಣಿ-ಕಿನ್ನಿಮಾಣಿ ಮಹಿಳಾ ಭಜನಾ ಸಂಘ ಬದಿಯಡ್ಕ, ಸಂಜೆ 6.30ರಿಂದ 7.30ರ ವರೆಗೆ ಶ್ರೀಮಹಾವಿಷ್ಣು ಭಜನಾ ಸಂಘ ಕಾರ್ಮಾರು, 7.30 ರಿಂದ ರಾತ್ರಿ 9ರ ವರೆಗೆ ಶ್ರೀನವದುರ್ಗಾ ಭಜನಾ ಸಂಘ ಬೀರಂಗೋಳು ತಂಡದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries