ಮಂಜೇಶ್ವರ: ಮಂಜೇಶ್ವರ ಸಮೀಪದ ಸಂತಡ್ಕ ಅರಸುಸಂಕಲ ದೈವ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಸ್ಥಳೀಯ ವಿಜಯಾ ಪ್ರೆಂಡ್ಸ್ ಕ್ಲಬ್ ಸಂತಡ್ಕ ಸಂಸ್ಥೆಯ ವಾರ್ಷಿಕೋತ್ಸವ ಜ.19 ರಂದು ಜರಗಲಿದ್ದು ರಾತ್ರಿ 8ಕ್ಕೆ ಸಭಾ ಕಾರ್ಯಕ್ರಮದಲ್ಲಿ ವಾರ್ಷಿಕವಾಗಿ ಕೊಡಮಾಡುವ ಪ್ರತಿಷ್ಠಿತ ಅರಸು ಸಂಕಲ ಕಲಾ ಪ್ರಶಸ್ತಿ ಪ್ರದಾನ ನಡೆಯಲಿದೆ.
ಈ ಬಾರಿಯ ಪ್ರಶಸ್ತಿಗೆ ತೆಂಕುತಿಟ್ಟಿನ ಬಹುಬೇಡಿಕೆಯ ಉದಯೋನ್ಮುಖ ಭಾಗವತ ಹನುಮಗಿರಿಮೇಳದ ರವಿಚಂದ್ರ ಕನ್ನಡಿಕಟ್ಟೆಯವರನ್ನು ಆಯ್ಕೆಮಾಡಲಾಗಿದ್ದು ಕಾರ್ಯಕ್ರಮದಲ್ಲಿ ಗಣ್ಯರ ಸಮಕ್ಷಮ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಂದರ್ಭ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಯೋಗೀಶ ರಾವ್ ಚಿಗುರುಪಾದೆಯವರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು. ಬಳಿಕ ಹನುಮಗಿರಿಮೇಳದವರಿಂದ ಶ್ರೀಕೃಷ್ಣ ಲೀಲಾಮೃತಮ್ ಬಯಲಾಟ ಜರಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.





