HEALTH TIPS

2021ರ ಪ್ರಾರಂಭಕ್ಕೆ ದೇಶದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ವಿಕ್ರಾಂತ್ ಕಾರ್ಯಾರಂಭ

       
     ನವದೆಹಲಿ: ದೇಶದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ವಿಕ್ರಾಂತ್ ನಿರ್ಮಾಣ ಇದೀಗ ಮೂರನೇ ಹಂತದಲ್ಲಿದ್ದು 2021 ರ ಆರಂಭದಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
    ಈ ಯುದ್ಧ ವಿಮಾನ ವಾಹಕವನ್ನು ಕೊಚ್ಚಿಯ ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್ (ಸಿಎಸ್‍ಎಲ್) ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ."ಪ್ರಸ್ತುತ, ವಿಕ್ರಾಂತ್ ನಿರ್ಮಾಣದ ಮೂರನೇ ಹಂತವು ಪ್ರಗತಿಯಲ್ಲಿದೆ, ಇದರಲ್ಲಿ ವಿದ್ಯುತ್ ಉತ್ಪಾದನೆ ಮತ್ತು ಪೆÇ್ರಪಲ್ಷನ್ ಯಂತ್ರೋಪಕರಣಗಳಂತಹ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಕೆಲಸಕ್ಕೆ ಸಿದ್ಧತೆ ನಡೆದಿದೆ.2021 ರ ಆರಂಭದಲ್ಲಿ ವಾಹಕವನ್ನು ನಿಯೋಜಿಸುವ ಸಾಧ್ಯತೆಯಿದೆ" ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.ವಾಯುಯಾನ ಪ್ರಯೋಗಗಳು ಸಹ ಒಂದು ವರ್ಷ ಅಥವಾ ಹೆಚ್ಚಿನ ಅವಧಿ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಡಿಸೆಂಬರ್ 3 ರಂದು ವಿಕ್ರಾಂತ್ 2022 ರ ವೇಳೆಗೆ ಸಂಪೂರ್ಣ ಕಾರ್ಯಾಚರಣೆಗೆ ಸಿದ್ದವಾಗುತ್ತದೆ ಎಂದು ಹಾಗೂ  ಇದು ಮಿಗ್ -29 ಕೆ ವಿಮಾನಗಳ ಸಮೂಹವನ್ನು ಹೊಂದಿರುತ್ತದೆ ಎಂದು ಹೇಳಿದ್ದರು.
     ಗಣರಾಜ್ಯೋತ್ಸವದಂದು ರಾಜಪಥ್ ನಲ್ಲಿ ನಡೆಯುವ ವಿಧ್ಯುಕ್ತ ಮೆರವಣಿಗೆಯಲ್ಲಿ ಮಿಗ್ -29 ಕೆ ವಿಮಾನದೊಂದಿಗೆ ಪೂರಕವಾದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ವಿಕ್ರಾಂತ್ ನೌಕಾಪಡೆಯ ಪ್ರದರ್ಶನದ ಭಾಗವಾಗಿ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries