ಕಾಸರಗೋಡು: ಪೆÇೀಲಿಯೋ ಪ್ರತಿರೋಧ ಚಟುವಟಿಕೆಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜ.19ರಂದು ಪೋಲಿಯೋ ರೋಗಪ್ರತಿರೋಧ ಬಿಂದು ಔಷಧ ವಿತರಣೆ ನಡೆಯಲಿದೆ. 5 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳಿಗೆ ಈ ಬಿಂದು ಔಷಧ ನೀಡಲಾಗುತ್ತದೆ. ಜಿಲ್ಲೆಯಲ್ಲಿ 116170 ಸ್ಥಳೀಯ ಮಕ್ಕಳಿಗೆ, 1013 ಇತರ ರಾಜ್ಯಗಳ ಕಾರ್ಮಿಕರ ಮಕ್ಕಳಿಗೆ ಔಷಧ ವಿತರಣೆ ಉದ್ದೇಶದಿಂದ 1469 ಪೆÇೀಲಿಯೋ ಬೂತ್ ಗಳನ್ನು ಸಜ್ಜುಗೊಳಿಸಲಾಗಿದೆ.
ಅಂಗನವಾಡಿಗಳು, ಶಾಲೆಗಳು, ಆರೋಗ್ಯ ಕೇಂದ್ರಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ,ಉತ್ಸವಗಳು ನಡೆಯುತ್ತಿರುವ ಪ್ರದೇಶಗಳ ಸಹಿತ ಮಕ್ಕಳು ಆಗಮಿಸಲು ಸಾಧ್ಯತೆಗಳಿರುವ ಕಡೆಗಳಲ್ಲಿ ಬೂತ್ ಗಳನ್ನು ಸ್ಥಾಪಿಸಿ ಔಷಧ ನೀಡಲಾಗುವುದು. ಬೆಳಗ್ಗೆ 8ರಿಂದ ಸಂಜೆ 5 ಗಂಟೆ ವರೆಗೆ ಬಿಂದು ಔಷಧ ವಿತರಣೆ ನಡೆಯಲಿದೆ.ಇತರ ರಾಜ್ಯಗಳ ಕಾರ್ಮಿಕರ ಶಿಬಿರಗಳಿರುವ ಪ್ರದೇಶಗಳಲ್ಲಿ 5 ವರ್ಷಕ್ಕಿಂತ ಕೆಳಗಿನ ಹರೆಯದ ಮಕ್ಕಳಿಗೆ ಬಿಂದು ಔಷಧ ನೀಡಿಕೆ ಉದ್ದೇಶದಿಂದ ಮೊಬೈಲ್ ಬೂತ್ ಸಹಿತ ಸಜ್ಜೀಕರಣ ನಡೆಸಲಾಗಿದೆ. ಯಾವುದೇ ಕಾರಣದಿಂದ ಈ ದಿನ ಬಿಂದು ಔಷಧ ಲಭಿಸದೇ ಇರುವ ಮಕ್ಕಳನ್ನು ಪತ್ತೆ ಮಾಡಿ ಸ್ವಯಂಸೇವಕರು ಅವರ ಮನೆಗಳಿಗೇ ತೆರಳಿ ಔಷಧ ವಿತರಣೆನಡೆಸುವರು.
ನೆರೆಯ ದೇಶಗಳಾದ ಪಾಕಿಸ್ತಾನ, ಅಫಘಾನಿಸ್ಥಾನ ಸಹಿತ ಕಡೆಗಳಲ್ಲಿ ಪೆÇೀಲಿಯೋ ರೋಗ ಪ್ರತಿರೋzs ಚಟುವಟಿಕೆಗಳು ಪರಿಣಾಮಕಾರಿಯಲ್ಲದೇ ಇರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮರಳಿ ಈ ಚಟುವಟಿಕೆಗಳನ್ನು ಚುರುಕುಗೊಳಿಸಲಾಗಿದೆ.ಈ ಸಂಬಂಧ ಹೆಚ್ಚುವರಿ ದಂಡನಾದಿಕಾರಿ ಅವರ ಛೇಂಬರ್‍ನಲ್ಲಿ ಸಭೆ ಜರುಗಿತು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ಆರ್.ಸಿ.ಎಚ್.ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ, ಜ್ಯೂನಿಯರ್ ಮೆಡಿಕಲ್‍ಆಫೀಸರ್ ಡಾ.ಆರತಿ ರಂಜಿತ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್, ಹೋಮಿಯೋ ಪ್ರಧಾನ ವೈದ್ಯಾಧಿಕಾರಿ ಡಾ.ಬಿ.ಅಂಬಿಳಿ, ಕಾಸರಗೋಡು ಸರ್ಕಾರಿ ಆಯುರ್ವೇದ ಆಸ್ಪತ್ರೆ ಪ್ರದಾನ ವೈದ್ಯಾದಿಕಾರಿಡಾ.ಟಿ.ಕೆ.ವಿಜಯಕುಮಾರ್, ಡೆಪ್ಯೂಟಿ ಡಿಸ್ಟ್ರಿಕ್ಟ್ ಮಾಸ್ ಮೀಡಿಯಾ ಅಧಿಕಾರಿ ಎಸ್.ಡಯಾನಾ, ಮಹಿಳಾ ಘಟಕ ಎಸ್.ಐ. ಸಿ.ಭಾನುಮತಿ, ಡಾ.ಎಂ.ಜಿತೇಂದ್ರ ರೈ, ಕೆ.ಎಸ್.ಇ.ಬಿ.ಪ್ರತಿನಿಧಿ ರಾಧಾಕೃಷ್ಣನ್ ನಾಯರ್, ವಿಧ ಇಲಾಖೆ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.





