ಕುಂಬಳೆ: ಬಂಬ್ರಾಣದ ಸರ್ಕಾರಿ ಬೇಸಿಕ್ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಜ.24 ರಂದು ಶುಕ್ರವಾರ ಸಂಜೆ 4 ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸಮಾರಂಭದ ಅಂಗವಾಗಿ ಆಯೋಜಿಸಲಾಗಿರುವ ಸಭಾ ಕಾರ್ಯಕ್ರಮದಲ್ಲಿ ಕುಂಬಳೆ ಗ್ರಾ.ಪಂ.ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್ ಅಧ್ಯಕ್ಷತೆ ವಹಿಸುವರು. ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ಉದ್ಘಾಟಿಸುವರು. ಬ್ಲಾಕ್ ಪಂಚಾಯತಿ ಸದಸ್ಯೆ ಯು.ಪಿ.ತಾಹಿರಾ ಯೂಸುಫ್, ಗ್ರಾ.ಪಂ.ಉಪಾಧ್ಯಕ್ಷೆ ಗೀತಾ ಎಲ್.ಶೆಟ್ಟಿ, ಸದಸ್ಯೆ ಮರಿಯಮ್ಮ ಮೂಸಾ, ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ., ಬ್ಲಾಕ್ ಸಂಪನ್ಮೂಲ ಕೇಂದ್ರದ ಯೋಜನಾಧಿಕಾರಿ ಗುರುಪ್ರಸಾದ್ ರೈ, ಗ್ರಾ.ಪಂ. ವಿದ್ಯಾಭ್ಯಾಸ ಸಮಿತಿ ಕಾರ್ಯದರ್ಶಿ ರಾಮಚಂದ್ರ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ವಿನೋದಾವಳಿಗಳು, ನಾಟ್ಯ ವಿದ್ಯಾ ನಿಲಯ ಕುಂಬಳೆ ತಂಡದವರಿಂದ ಜಾನಪದ ನೃತ್ಯ ಸಂಭ್ರಮ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.


