ಕಾಸರಗೋಡು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಪ್ರಜಾಪ್ರಭುತ್ವ ರೀತಿಯಲ್ಲಿ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋ„ಸಿ ಕಾಸರಗೋಡು ನಗರಸಭೆಯಲ್ಲಿ ಠರಾವು ಮಂಡಿಸಬೇಕು ಎಂದು ಆಗ್ರಹಿಸಿ ಕಾಸರಗೋಡು ನಗರಸಭೆಯ ಸಿಪಿಎಂ ಕೌನ್ಸಿಲರ್ ದಿನೇಶ್ ಚಿನ್ನಿಕ್ಕರ ಅವರು ಕಾಸರಗೋಡು ನಗರಸಭೆಯ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ ಅವರಿಗೆ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಸಂವಿಧಾನಕ್ಕೆ ಹಾಗೂ ನ್ಯಾಯಯುತವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ನಗರಸಭೆಯಲ್ಲಿ ಠರಾವು ಮಂಡಿಸಲು ಹೊರಟರೆ ಮುಂದಿನ ಎಲ್ಲ ಅನಾಹುತಗಳಿಗೆ ಅವರೇ ಹೊಣೆಯಾಗಬೇಕಾದೀತು ಎಂದು ಬಿಜೆಪಿ ನಗರಸಭಾ ಸಮಿತಿಯು ಮುನ್ನೆಚ್ಚರಿಕೆ ನೀಡಿದೆ.
ಕಳೆದ ವರ್ಷ ಇದೇ ಸಮಯಕ್ಕೆ ಪವಿತ್ರ ಶಬರಿಮಲೆಯ ಆಚಾರ ಸಂರಕ್ಷಣೆಗೆ ಸಂಬಂ„ಸಿದ ವಿಚಾರದಲ್ಲಿ ಅನೇಕ ಹೋರಾಟಗಳು ನಡೆಯುವ ಸಂದರ್ಭದಲ್ಲಿ ಕಾಸರಗೋಡು ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಉಪಾಧ್ಯಕ್ಷರೂ ಆಗಿರುವ ದಿನೇಶ್ ಚಿನ್ನಿಕ್ಕರ ಅವರು ಶಬರಿಮಲೆ ಆಚಾರ ಸಂರಕ್ಷಣೆ ಪರವಾದ ಠರಾವು ಮಂಡಿಸಬೇಕು ಎಂದು ಆಗ್ರಹಿಸಿ ಎಲ್ಲಿ ಕೂಡ ಮನವಿ ನೀಡಿರಲಿಲ್ಲ ಎಂಬುದನ್ನು ಬಿಜೆಪಿ ನೆನಪಿಸಿದೆ.
ಕೇವಲ ವೋಟಿಗೊಸ್ಕರ ಜನರನ್ನು ಬೇರ್ಪಡಿಸಿ ದೇಶದ ಹಿತವನ್ನು ಬಯಸದ ಸಿಪಿಎಂ ಪಕ್ಷದ ರಾಜಕೀಯ ನೀತಿ ದುರದೃಷ್ಟಕರವಾಗಿದೆ. ಅಲ್ಪಸಂಖ್ಯಾತರ ಮತವನ್ನು ಪಡೆಯಲು ಸ್ಪರ್ಧೆ ನಡೆಯುತ್ತಿದೆ. ಒಂದು ವೇಳೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಠರಾವನ್ನು ಮಂಡಿಸಲು ಶ್ರಮಿಸಿದರೆ ಭಾರತೀಯ ಜನತಾ ಪಕ್ಷದ ಉಗ್ರ ಹೋರಾಟವನ್ನು ಎದುರಿಸಬೇಕಾದೀತು ಎಂದು ಬಿಜೆಪಿ ಕಾಸರಗೋಡು ನಗರ ಸಮಿತಿಯ ಪ್ರಧಾನ ಕಾರ್ಯದರ್ಶಿ, ನಗರಸಭಾ ಸದಸ್ಯ ಕೆ.ಜಿ.ಮನೋಹರನ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.