HEALTH TIPS

ಚಂದ್ರಗಿರಿ ವಲಯ ಸಭೆ


            ಮುಳ್ಳೇರಿಯ: ಮುಳ್ಳೇರಿಯಾ ಮಂಡಲಾಂತರ್ಗತ ಚಂದ್ರಗಿರಿ ವಲಯ ಸಭೆಯು ಶಾಂತಿನಗರದ  ಪಾತನಡ್ಕ ನರಸಿಂಹ ಭಟ್ ರ ನಿವಾಸದಲ್ಲಿ ಇತ್ತೀಚೆಗೆ ಜರಗಿತು.
             ಘಟಕಾಧ್ಯಕ್ಷರಾದ ಪೇರಡ್ಕ ಶ್ಯಾಮ ಭಟ್ ಧ್ವಜಾರೋಹಣಗೈದು ಚಾಲನೆ ನೀಡಿದರು. ಶಂಖನಾದ, ಗುರುವಂದನೆ, ಗೋಸ್ತುತಿಯಾಗಿ ಸಭೆ ಪ್ರಾರಂಭವಾಯಿತು.
ವಲಯ ವಿದ್ಯಾರ್ಥಿವಾಹಿನಿ ಪ್ರಧಾನರಾದ ಅಮ್ಮಂಕಲ್ಲು ಬಾಲಕ್ರಷ್ಣ ಭಟ್ಟರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಕಾರ್ಯದರ್ಶಿ ಗಣೇಶ ಕುಂಜತ್ತೋಡಿ ಸ್ವಾಗತಿಸಿ ಗತ ಸಭೆಯ ವರದಿ ನೀಡಿದರು. ವಲಯ ಕೋಶಾಧಿಕಾರಿ ವಿನೋದ ಮರದಮೂಲೆ ಲೆಕ್ಕಪತ್ರ ಮಂಡಿಸಿದರು. ಶ್ರೀ ಮಠದಿಂದ ಬಂದ ರಾಯಸ ಪತ್ರವನ್ನು ಗುರಿಕ್ಕಾರರಿಗೆ ಹಂಚಲಾಯಿತು.
ಸಭಾ ನಿರೀಕ್ಷಕರಾಗಿ ಆಗಮಿಸಿದ ಮಂಡಲ ಸಹಾಯ ವಿಭಾಗ ಪ್ರಧಾನರಾದ ಸರಳಿ ಮಹೇಶ್ ಶ್ರೀ ಮಠದ ಯೋಜನೆಗಳಾದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ, ಕರಾವಲಂಬನ ಪಾರಾಯಣ, ಗಾಯತ್ರೀ ಜಪ, ರುದ್ರಪಾರಾಯಣ, ಕುಂಕುಮಾರ್ಚನೆ ಇತ್ಯಾದಿ ವಿಚಾರಗಳ ಅನುಷ್ಠಾನದ ಮಹತ್ವದ ಕುರಿತು ತಿಳಿಸಿದರು.
           ವಲಯ ಮಾತೃ ಪ್ರಧಾನೆ ಗೀತಾಲಕ್ಷ್ಮಿ ಅನಘಾ ಇವರು ಮಾತೃತ್ವಮ್ ಯೋಜನೆಯ ಮಾಹಿತಿ ನೀಡಿ ಪಳ್ಳತ್ತಡ್ಕದಲ್ಲಿ ಜರಗಿದ ವಲಯೋತ್ಸವ ಕಾರ್ಯಕ್ರಮ, ಸಂತತಿ ಮಂಗಲದ ಕುರಿತು ತಿಳಿಸಿದರು.
         ಸಹಾಯ ವಿಭಾಗದ ಪ್ರದಾನ  ಡಾ.ಶ್ರೀ ಕೃಷ್ಣರಾಜ ಕಾಟಿಪ್ಪಳ್ಳ ರಕ್ತದಾನಿಗಳ ಮಾಹಿತಿ ಸಂಗ್ರಹದ ಆವಶ್ಯಕತೆಯ ಕುರಿತು ಮಾಹಿತಿ ನೀಡಿದರು. ವಲಯದ ಪ್ರತಿಯೊಂದು ಘಟಕಗಳಲ್ಲಿ ಘಟಕ ಸಭೆಯು ಯಶಸ್ವೀಯಾಗಿ ನಡೆಯುವುದರ ಕುರಿತು ಸಭೆಯಲ್ಲಿ ಪ್ರಶಂಸೆ ವ್ಯಕ್ತವಾಯಿತು. ಗುರುವಂದನೆ, ದೀಪ ಕಾಣಿಕೆ, ಬೆಳೆ ಸಮರ್ಪಣೆಯನ್ನು ಪ್ರತೀ ಘಟಕದಲ್ಲೂ ಘಟಕಾಧ್ಯಕ್ಷರ ಮನೆಗಳಲ್ಲಿ ನಿರ್ದಿಷ್ಟ ದಿನಾಂಕಗಳಂದು ನಡೆಸುವುದೆಂದು ತೀರ್ಮಾನಿಸಲಾಯಿತು. ವಲಯ ವೈದಿಕ ಪ್ರಧಾನನ ನರಸಿಂಹರಾಜ ಪಯ ಪ್ರದೋಷ ರುದ್ರಪಾರಾಯಣ ಜರಗಿದ ಮಾಹಿತಿ ಸಭೆಗೆ ನೀಡಿದರು. ವಲಯ ಸೇವಾ ವಿಭಾಗದ ಪ್ರಧಾನರಾದ ರಾಜಗೋಪಾಲ ಕುಂಜತ್ತೋಡಿ ಪೆರಾಜೆ ಮಾಣಿ ಮಠದಲ್ಲಿ ಜರಗುವ ಸೂತ್ರ ಸಂಗಮ, ವೇದಪಾಠಶಾಲೆಯ ವಾರ್ಷಿಕೋತ್ಸವದ ಕಾರ್ಯಕ್ರಮದ ಯಶಸ್ವಿಗೆ ವಲಯದಿಂದ ಹೆಚ್ಚಿನ ಸಂಖೈಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
    ಬಳಿಕ ಮಂಡಲದಿಂದ ಬಂದ ನಿರ್ದೇಶನ, ಮಾಹಿತಿಗಳನ್ನು ಸಭೆಗೆ ತಿಳಿಸಲಾಯಿತು. ನಂತರ ವಿಭಾಗವಾರು ವರದಿ ಮಂಡಿಸಲಾಯಿತು. ರಾಮತಾರಕ ಮಂತ್ರ, ಶಾಂತಿಮಂತ್ರ, ಧ್ವಜಾವತರಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries