HEALTH TIPS

ಎನ್.ಟಿ.ಯು. ಕುಂಬಳೆ ಉಪಜಿಲ್ಲಾ ವತಿಯಿಂದ ವಿವೇಕಾನಂದರ ಜನ್ಮದಿನಾಚರಣೆ

 
        ಬದಿಯಡ್ಕ: ದೇಶೀಯ ಅಧ್ಯಾಪಕ ಪರಿಷತ್ (ಎನ್.ಟಿ.ಯು) ಕುಂಬಳೆ ಉಪಜಿಲ್ಲಾ ಸಮಿತಿಯ ವತಿಯಿಂದ ಬದಿಯಡ್ಕ ಕಶ್ಯಪ ನಿವಾಸದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಆಚರಿಸಲಾಯಿತು. ಉಪಜಿಲ್ಲಾ ಖಜಾಂಜಿ ಕವಿತಾ ಟೀಚರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಶರತ್ ಕುಮಾರ್ ಮಾತನಾಡಿ ವಿವೇಕಾನಂದರ ಆದರ್ಶವನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದೃಢ ಭಾರತ ನಿರ್ಮಾಣಕ್ಕೆ ಪಣತೊಡಬೇಕು. ಭಾರತೀಯ ಸಂಸ್ಕøತಿಯನ್ನು ಮೇರುಪಥಕ್ಕೆ ಕೊಂಡೊಯ್ಯಲು ಕಂಕಣಬದ್ಧರಾಗಬೇಕಾಗಿದೆ. ಸ್ವಾಮಿ ವಿವೇಕಾನಂದರು ನಮ್ಮ ದೇಶದ ಹಿರಿಮೆಯ ಪ್ರತೀಕ. ಅವರ ಚಿಂತನೆಗಳು, ಭಾಷಣಗಳು ಅವರ ಪ್ರಬುದ್ಧತೆಯ ಬಗ್ಗೆ ಸವಿವರಗಳನ್ನು ನೀಡುತ್ತದೆ. ರಾಷ್ಟ್ರೀಯ ಯುವಕರ ದಿನವಾದ ಇಂದು ನಮಗೆಲ್ಲ ಅವರು ಆದರ್ಶರಾಗಿದ್ದಾರೆ ಎಂದರು. ನಿವೃತ್ತ ಕ್ಯಾಂಪ್ಕೋ ವ್ಯವಸ್ಥಾಪಕ ಶ್ಯಾಮ ಭಟ್ ಶೇಡಿಗುಮ್ಮೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಿವೃತ್ತ ಅಧ್ಯಾಪಿಕೆ ಗೀತಾ ಉಪಸ್ಥಿತರಿದ್ದರು. ಎನ್.ಟಿ.ಯು.ಜೊತೆಕಾರ್ಯದರ್ಶಿ ಚಂದ್ರಶೇಖರ ಎ.ಎನ್. ನಿರೂಪಿಸಿದರು. ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries