ಕುಂಬಳೆ: ಗೋಕರ್ಣ ಮೂಲಮಠ ಅಶೋಕೆಯಲ್ಲಿ ಲೋಕಾರ್ಪಣೆಯಾಗಲಿರುವ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಬಗ್ಗೆ ಜನಸಂಪರ್ಕ ಅಭಿಯಾನವು ಗುಂಪೆ ವಲಯ ಅಧ್ಯಕ್ಷ ಅಮ್ಮಕಂಲ್ಲು ರಾಮ ಭಟ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.
ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನ ಹಾಗೂ ಸಂದೇಶಗಳನ್ನು ಪ್ರತಿ ಮನೆಗೂ ತಲುಪುವಂತೆ ಅಭಿಯಾನ ಮಾಡಲಾಯಿತು.
ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು, ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ವಿದ್ಯಾರ್ಥಿ ವಾಹಿನಿ ಪ್ರಧಾನ ಗುರುಮೂರ್ತಿ ಮೇಣ, ಗುಂಪೆ ವಲಯ ಉಪಾಧ್ಯಕ್ಷ ವೆಂಕಟೇಶ್ವರ ಭಟ್ ಎಡಕ್ಕಾನ, ಕೋಶಾಧಿಕಾರಿ ಅಮ್ಮಂಕಲ್ಲು ರಾಜಗೋಪಾಲ ಭಟ್, ಗುರಿಕ್ಕಾರ ಬಿ.ಎಲ್. ಶಂಭು ಹೆಬ್ಬಾರ, ಪುಟಾಣಿ ರಾಮ ಶರ್ಮ ಎಡಕ್ಕಾನ ಅಭಿಯಾನದಲ್ಲಿ ಭಾಗವಹಿಸಿದರು.




