ಮಂಜೇಶ್ವರ: ವರ್ಕಾಡಿ ಕಳಿಯೂರು ಸಂತ ಜೋಸೆಫ್‍ರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸೃಜನೋತ್ಸವ ಜ.16 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಗ್ಗೆ 9.30 ಕ್ಕೆ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್ ಧ್ವಜಾರೋಹಣ ಮಾಡುವರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಜೇಶ್ವರ ಉದಯನಗರದ ಉದಯ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲ ಫಾದರ್.ಮೆಲ್ವಿನ್ ಲೋಬೋ, ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯ ಗೋಪಾಲಕೃಷ್ಣ ಪಜ್ವ, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ದಿವಾಕರ ಎಸ್.ಜೆ. ಭಾಗವಹಿಸುವರು. ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ನಡೆಯಲಿದೆ. ಸಂಜೆ 4 ರಿಂದ ಶಾಲಾ ವಾರ್ಷಿಕೋತ್ಸವ ಜರಗಲಿದೆ.



