ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರಾಮಹೋತ್ಸವದ ಮಂಗಳವಾರ ನಡೆದ ಧ್ವಜಾರೋಹಣದ ಬಳಿಕ ಶ್ರೀಕ್ಷೇತ್ರದ ಪುನರ್ ನವೀಕರಣ-ಬ್ರಹ್ಮಕಲಶೋತ್ಸವದ ಕಾರ್ಯಾಲಯವನ್ನು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಿ, ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭ ಆಶೀರ್ವಚನ ನೀಡಿದ ಮಾಣಿಲ ಶ್ರೀಗಳು, ಕಾರಣಿಕದ ಕುಂಬಳೆ ಸೀಮೆಯ ಪ್ರಧಾನ ಕ್ಷೇತ್ರಗಳಲ್ಲಿ ಒಮದಾಗಿರುವ ಕಣಿಪುರದ ಜೀರ್ಣೋದ್ದಾರ ಪ್ರಕ್ರಿಯೆಗಳು ಸುಲಲಿತವಾಗಿ ನೆರವೇರಿ ಬ್ರಹ್ಮಕಲಶೋತ್ಸವ ನಡೆಸುವಲ್ಲಿ ಭಕ್ತರು ಶ್ರೀದೇವರ ಅನವರತ ಸೇವಾ ಕೈಂಕರ್ಯದಲ್ಲಿ ಭಾಗವಹಿಸಬೇಕು. ಭಗವಂತನಿಗೆ ಆಗುವ ತೃಪ್ತಿಯ ಮೂಲಕ ನಮ್ಮ ಸಂಕಷ್ಟಗಳಿಂದ ಪಾರಾಗುವ ಮಾರ್ಗವನ್ನು ಮನಗಾಣಬೇಕು ಎಂದು ತಿಳಿಸಿ, ಒಗ್ಗಟ್ಟಿನ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಮದರು.
ದೈವಸ್ವಂ ಆಡಳಿತಾಧಿಕಾರಿ ಟಿ.ಸಿ ವರ್ಮರಾಜ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಘುನಾಥ ಪೈ, ನಾರಾಯಣ ಪ್ರಭು, ಜಯಕುಮಾರ್, ವಿಕ್ರಂ ಪೈ ಕುಂಬಳೆ, ಮಂಜುನಾಥ ಆಳ್ವ ಮಡ್ವ, ಪುಂಡರೀಕಾಕ್ಷ ಕೆ.ಎಲ್, ಲಕ್ಷ್ಮಣ ಪ್ರಭು,ಶಂಕರ ಆಳ್ವ, ದಯಾನಂದ ರಾವ್, ವರುಣ, ರಾಮಚಂದ್ರ ಭಕ್ತ ಮೊದಲಾದವರು ಉಪಸ್ಥಿತರಿದ್ದರು.




