ಕಾಸರಗೋಡು: `ಇಂಡಿಯಾ ಇನ್ ರಿಪಬ್ಲಿಕ್' ಎಂಬ ವಿಷಯದಲ್ಲಿ ಜಿಲ್ಲಾ ಮಟ್ಟದ ವಿಚಾರಸಂಕಿರಣ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರುಗಿತು.
ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಮಿಷನ್ ನೇತೃತ್ವದಲ್ಲಿ ಸಂವಿಧಾನ ಸಾಕ್ಷರತೆ ಯಜ್ಞದ ದ್ವಿತೀಯ ಹಂತ ಸಂಬಂಧ ನೋಡೆಲ್ ಪ್ರೇರಕರಿಗಾಗಿ ಈ ವಿಚಾರಸಂಕಿರಣ ನಡೆಯಿತು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂವಿಧಾನ ಕುರಿತು ಅರಿತುಕೊಳ್ಳಲು ಸಂವಿಧಾನ ಸಾಕ್ಷರತಾ ಯಜ್ಞ ಉತ್ತಮವಾಗಿದ್ದು, ಮೌಲಿಕ ಹಕ್ಕು ಮತ್ತು ಹೊಣೆಗಾರಿಕೆ ಬಗ್ಗೆ ಅರಿತುಕೊಳ್ಳಲು ಇದು ಪೂರಕ ಎಂದವರು ನುಡಿದರು.
ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್ ಸಮನ್ವಯಕಾರರಾಗಿದ್ದರು. ಜಿಲಾ ಸಾಕ್ಷರತಾ ಮಿಷನ್ ಸಂಚಾಲಕ ಷಾಜು ಜಾನ್, ಸಹಾಯಕ ಸಂಚಾಲಕಿ ಸಯಾ ನಾಸರ್, ಸದಸ್ಯ ರಾಜನ್ ಪೆÇಯಿನಾಚಿ, ತರಬೇತಿ ಸಂಚಾಲಕ ಕೆ.ವಿ.ಕುಂಞÂರಾಮನ್ ಉಪಸ್ಥಿತರಿದ್ದರು.
150 ಕೇಂದ್ರಗಳಲ್ಲಿ ಮೆರವಣಿಗೆ :
ಸಂವಿಧಾನ ಸಾಕ್ಷರತಾ ಯಜ್ಞ ಅಂಗವಾಗಿ ಜಿಲ್ಲೆಯ 150 ಕೇಂದ್ರಗಳಲ್ಲಿ ಜನಜಾಗೃತಿ ಮೆರವಣಿಗೆ ನಡೆಯಲಿದೆ. ನೋಡೆಲ್ ಪ್ರೇರಕರು ನೇತೃತ್ವ ವಹಿಸುವರು.
ಕಲಾಜಾಥಾ, ಸಂದೇಶ ಯಾತ್ರೆ : ಸಂವಿಧಾನ ಸಾಕ್ಷರತಾ ಯಜ್ಞ ಅಂಗವಾಗಿ ಜ.17ರಂದು ಕಾಸರಗೋಡಿನಿಂದ ನೀಲೇಶ್ವರ ವರೆಗೆ ಕಲಾಜಾಥಾ ಪರ್ಯಟನೆ ನಡೆಸಲಿದೆ. ಜ.20ರಂದು ಜಿಲ್ಲೆಯ 75 ಕಾಲನಿಗಳಲ್ಲಿ ನೋಡೆಲ್ ಪ್ರೇರಕರ ನೇತೃತ್ವದಲ್ಲಿ ರಿಪಬ್ಲಿಕ್ ಸಂದೇಶ ಯಾತ್ರೆ ಜರುಗಲಿದೆ.





