ಕಾಸರಗೋಡು: ತರಕಾರಿ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವ ಉದ್ದೇಶದಿಂದ 2021 ಎಪ್ರಿಲ್ ತಿಂಗಳ ವರೆಗೆ (470 ದಿನಗಳ ಕಾಲ) ನಡೆಯುವ ಬೃಹತ್ ಕ್ರಿಯಾ ಯೋಜನೆ `ಜೀವನಿ'ಯ ಜಿಲ್ಲಾ ಮಟ್ಟದ ಉದ್ಘಾಟನೆಗೆ ಸಿದ್ಧವಾಗಿದೆ. ಪಂಚಾಯತ್ ಸದಸ್ಯರಿಂದ ಎಲ್ಲ ಜನಪ್ರತಿನಿಧಿಗಳು, ಪತ್ರಕರ್ತರ ವರೆಗೆ ಪ್ರತಿ ಮನೆಗಳಲ್ಲಿ ತರಕಾರಿ ಕೃಷಿ ನಡೆಸುವ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೊಳ್ಳಲಿದೆ. ಸುರಕ್ಷಿತ ಮತ್ತು ಪೆÇೀಷಕ ಸಮೃದ್ಧ ಆಹಾರ ಖಚಿತಪಡಿಸುವ ಯೋಜನೆಗೆ ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತೆ ಇಲಾಖೆಗಳ ಸಹಕಾರ ಇರುವುದು. ಎಲ್ಲ ಮನೆಗಳಲ್ಲಿ ನುಗ್ಗೇಕಾಯಿ, ಪಪ್ಪಾಯ ಸಹಿತ ದೀರ್ಘಕಾಲ ತರಕಾರಿ ನಡೆಸುವುದನ್ನು ಬೆಂಬಲಿಸುವ, ತರಕಾರಿ ಕೃಷಿಗೆ ಪೂರಕವಾದ ಜಾಗ ಸೌಕರ್ಯ ಇರುವ ಮನೆಗಳಲ್ಲಿ, ಸಂಸ್ಥೆಗಳಲ್ಲಿ, ಖಾಸಗಿ ಪ್ರದೇಶಗಳಲ್ಲಿ ತರಕಾರಿ ಕೃಷಿಗೆ ಪೆÇ್ರೀತ್ಸಾಹ ನೀಡುವುದು, ಜಿಲ್ಲೆಯ ಉತ್ಪನ್ನಗಳಾದ ಮಂಜೇಶ್ವರ ಬೆಂಡೆ, ಮುಳ್ಳು ಸೌತೆ ಇತ್ಯಾದಿಗಳಿಗೆ `ಜೀವನಿ' ಆದ್ಯತೆ ನೀಡಲಿದೆ.
ಜ.9ರಂದು ಉದ್ಘಾಟನೆ : `ಜೀವನಿ' ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಜ.9ರಂದು ನಡೆಯಲಿದೆ. ಕಾಂಞಂಗಾಡ್ ಪುರಭವನದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾರಂ`Àದಲ್ಲಿ ಕೃಷಿ ಸಚಿವ ನ್ಯಾಯವಾದಿ ವಿ.ಎಸ್.ಸುನಿಲ್ ಕುಮಾರ್ ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟಿಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಾಧಕರಿಗೆ ಅಭಿನಂದನೆ ನಡೆಯಲಿದೆ.
ಜ.7ರಂದು ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ : ಜೀವನಿ ಯೋಜನೆಗಾಗಿ ಪಾಳು ವಸ್ತುಗಳಿಂದ ಲಾಂಛನ ನಿರ್ಮಿಸುವ ನಿಟ್ಟಿಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಯಲಿದೆ. ಜ.7ರಂದು ಮಧ್ಯಾಹ್ನ 2 ಗಂಟೆಗೆ ಕಾಂಞಂಗಾಡ್ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಎ-4 ಕಾಗದದ ಗಾತ್ರದಲ್ಲಿ ಲಾಂಛನ ಇರಬೇಕು. ಲಾಂಛನ ರಚನೆಗೆ ಬೇಕಾದ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳೇ ತರಬೇಕು. ಒಂದೂವರೆ ತಾಸಿನ ಅವಧಿಯಲ್ಲಿ ಸ್ಪರ್ಧೆ ಇರುವುದು. ಜ.9ರಂದು ಕಾಂಞಂಗಾಡ್ ಪುರಭವನದಲ್ಲಿ ನಡೆಯುವ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.ಆಸಕ್ತವಿದ್ಯಾರ್ಥಿಗಳು ಮುಖ್ಯಶಿಕ್ಷಕರ ದೃಢೀಕರಣ ಪತ್ರ ಸಹಿತ ಅಂದು ಕ್ಲಪ್ತ ಸಮಯಕ್ಕೆ ಹಾಜರಾಗಬೇಕು ಎಂದು ಪ್ರಧಾನ ಕೃಷಿ ಅಧಿಕಾರಿ ತಿಳಿಸಿರುವರು.




